ಎಲ್ಲೆಲ್ಲೂ ರಕ್ಕಮ್ಮನದ್ದೇ ಸದ್ದು. ಲಾಲ್ ಬಾಗ್‍ಗೆ ಹೋದರೂ ರಕ್ಕಮ್ಮ. ನೈಸ್ ರಸ್ತೆಗೆ ಹೋದರೂ ರಕ್ಕಮ್ಮ. ರೀಲ್ಸ್ ತೆಗೆದರೆ ಅಲ್ಲೂ ರಕ್ಕಮ್ಮ. ಸೆಲಬ್ರಿಟಿಗಳನ್ನು ನೋಡಿದರೆ ಅವರದ್ದೂ ರಕ್ಕಮ್ಮ.. ಒಟ್ಟಿನಲ್ಲಿ ವಿಕ್ರಾಂತ್ ರೋಣದ ರಕ್ಕಮ್ಮ ಹಾಡು ನೋಡಿದವರಿಗೆ.. ಕೇಳಿದವರಿಗೆ.. ಕ್ರೇಜ್ ಅಲ್ಲ.. ಹುಚ್ಚು ಹಿಡಿಸಿದೆ. ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಹಾಡಿಗೆ ಕುಣಿಯುತ್ತಿದ್ದಾರೆ. 250ಕ್ಕೂ ಹೆಚ್ಚು ಮಕ್ಕಳು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.
ಸುದೀಪ್ ಅಭಿಮಾನಿಗಳಾದ ಬಾಲಾಜಿ ವಿಷ್ಣು ತಂಡ 250ಕ್ಕೂ ಹೆಚ್ಚು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಜೊತೆ ಸಾರ್ವಜನಿಕರೂ ರಾ..ರಾ..ರಕ್ಕಮ್ಮ ಎಂದು ಕುಣಿದರು. ಈಗ ವಿಕ್ರಾಂತ್ ರೋಣದ ಉಳಿದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರತಂಡದ ಸದಸ್ಯರ ಪ್ರಕಾರ ರಾ..ರಾ.. ರಕ್ಕಮ್ಮನಂತೆಯೇ ಆ ಹಾಡುಗಳೂ ಗುಂಗು ಹಿಡಿಸುವಂತಿವೆ.
ಹೇ ಫಕೀರಾ..
ಗುಮ್ಮ ಬಂದ..
ಚಿಕ್ಕಿ ಗೊಂಬೆ..
ಲುಲ್ಲಾಬಿ ಹಾಡುಗಳು ಶೀಘ್ರದಲ್ಲೇ ಒಂದೊಂದೇ ರಿಲೀಸ್ ಆಗಲಿವೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತದ ರಾಯಭಾರಿಯಾಗಿದ್ದಾರೆ.