ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ರಿಲೀಸ್ ಆಗಿ ಯಾವುದೋ ಕಾಲವಾಗಿತ್ತು. ಈಗ ಮತ್ತೊಮ್ಮೆ ಅಂತಾದ್ದೊಂದು ಫೈಟ್ ಶುರುವಾಗಿದೆ. ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ರಿಲೀಸ್ ಡೇಟ್ ಘೋಷಿಸಿವೆ. ಸೆಪ್ಟೆಂಬರ್ 30ಕ್ಕೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರಾ ರಿಲೀಸ್ ಆಗುತ್ತಿದೆ. ಇದು ಹೊಂಬಾಳೆ ಬ್ಯಾನರ್ ಸಿನಿಮಾ.
ಇದಕ್ಕೂ ಮೊದಲು ಮಾರ್ಟಿನ್ ಚಿತ್ರ ತಿಂಗಳುಗಳ ಹಿಂದೆಯೇ, ಏಪ್ರಿಲ್‍ನಲ್ಲೇ..
ಸೆಪ್ಟೆಂಬರ್ 30ರಂದು ರಿಲೀಸ್ ಎಂದು ಘೋಷಿಸಿತ್ತು. ಮಾರ್ಟಿನ್ ಚಿತ್ರ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ. ಧ್ರುವ ಸರ್ಜಾ ಹೀರೋ ಆಗಿರುವ ಚಿತ್ರಕ್ಕೆ ಎ.ಪಿ.ಅರ್ಜುನ್ ನಿರ್ದೇಶನವಿದೆ. ಇದು ಉದಯ್ ಕೆ.ಮೆಹ್ತಾ ನಿರ್ಮಾಣದ ಸಿನಿಮಾ.