ಕಾಮಿಡಿ ಸ್ಟಾರ್ ಶರಣ್, ಚುಟುಚುಟು ಚೆಲುವೆ ಆಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಶ್ರೀನಗರ ಕಿಟ್ಟಿ ಕಾಂಬಿನೇಷನ್ ಸಿನಿಮಾ ಅವತಾರ್ ಪುರುಷ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಥಿಯೇಟರುಗಳಲ್ಲಿ 25 ದಿನ ಪೂರೈಸಿರುವ ಅವತಾರ್ ಪುರುಷ ಭಾಗ 1, 50ನೇ ದಿನದತ್ತ ದಾಪುಗಾಲಿಟ್ಟಿದೆ.
ಮಾಟ, ಮಂತ್ರ, ದೇವರು, ಕಾಮಿಡಿ, ಥ್ರಿಲ್ಲರ್.. ಎಲ್ಲವನ್ನೂ ಹದವಾಗಿ ಬೆರೆಸಿರುವ ಸಿನಿಮಾ ಅವತಾರ ಪುರುಷ. ಶರಣ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದು, ಚಿತ್ರದ ಕೊನೆಗೆ ಕೊಟ್ಟಿರುವ ಶಾಕ್, ಅದೂವರೆಗೆ ನಗುವ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಸುಳ್ಳಲ್ಲ. ಚಿತ್ರ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಒಟಿಟಿಗೂ ಬರಲಿದೆ.