ಪಠ್ಯ ಪುಸ್ತಕ ವಿವಾದದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚರ್ಚೆಯಲ್ಲಿರುವ ವ್ಯಕ್ತಿ ಸಾಹಿತಿ ಬರಗೂರು ರಾಮಚಂದ್ರಪ್ಪ. ಇದರ ನಡುವೆಯೇ ಬರಗೂರು ಅವರ ನಿರ್ದೇಶನದ ಸಿನಿಮಾವೊಂದು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದೆ. ಬರಗೂರು ನಿರ್ದೇಶನದ ತಾಯಿ ಕಸ್ತೂರ್ ಗಾಂಧಿ ಚಿತ್ರ ಅಮೆರಿಕದ ಡಲ್ಲಾಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಿಟ್ಟಿಸಿದೆ.
ಕಸ್ತೂರ್ ಬಾ ಪಾತ್ರದಲ್ಲಿ ನಟಿ ಹರಿಪ್ರಿಯ ಹಾಗೂ ಗಾಂಧೀಜಿ ಪಾತ್ರದಲ್ಲಿ ನಟ ಕಿಶೋರ್ ನಟಿಸಿದ್ದಾರೆ. ಶ್ರೀನಾಥ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್.. ಸೇರಿದಂತೆ ಬೃಹತ್ ತಾರಾಗಣವೇ ಇರುವ ಚಿತ್ರ ತಾಯಿ ಕಸ್ತೂರ್ ಗಾಂಧಿ. ಚಿತ್ರದ ಸಂಕಲನಕ್ಕಾಗಿ ಸಂಕಲನಕಾರ ಸುರೇಶ್ ಅರಸ್ ಪ್ರಶಸ್ತಿ ಪಡೆದಿದ್ದಾರೆ. ಬಿ.ಜಿ.ಗೀತಾ ಅವರ ಮಿತ್ರ ಮೂವೀಸ್ ಚಿತ್ರವನ್ನು ನಿರ್ಮಾಣದ ಮಾಡಿದೆ.