ರಾ ರಾ ರಕ್ಕಮ್ಮ.. ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿಬಿಟ್ಟಿದೆ. ಎಲ್ಲೆಲ್ಲೂ ರಕ್ಕಮ್ಮಳದ್ದೇ ಸದ್ದು. ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಟೆಪ್ ಹಾಕಿದ ನಂತರ ಅದನ್ನು ರೀಲ್ಸ್ ಮಾಡಿದ್ದು ಸುದೀಪ್. ಅದಾದ ಮೇಲೆ ಶುರುವಾಯ್ತು ರಕ್ಕಮ್ಮನ ಹವಾ. ಸ್ಟಾರುಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫ್ಯಾನ್ಸ್ಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫಾರಿನ್ನವರೂ ಅದೇ ಹಾಡಿಗೆ ಸ್ಟೆಪ್ ಹಾಕ್ತಿದ್ದಾರೆ.
ನಮಸ್ಕಾರ ಎಲ್ಲರಿಗೂ.. ರಾ.. ರಾ.. ರಕ್ಕಮ್ಮ ಹಾಡು ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲ ಇನ್ಮೇಲೆ ಒಂದೇ ಹೆಸರು.. ವಿಕ್ರಾಂತ್ ರೋಣ.. ಎಂದು ಕನ್ನಡದಲ್ಲೇ ಹೇಳಿ ಖುಷಿ ಹೆಚ್ಚಿಸಿದ್ದಾರೆ ರಕ್ಕಮ್ಮ.
ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನ ಹಾಡಿಗೆ ನಕಾಶ್ ಅಜೀಝ್, ಸುನಿಧಿ ಚೌಹಾಣ್ ಹಾಡಿದ್ದರೆ, ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ನೀಡಿದ್ದಾರೆ. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನ ಹಾಡು ಅಭಿಮಾನಿಗಳಿಗೆ ಕಿಕ್ಕೇರಿಸಿದ್ದರೆ, ಅಭಿಮಾನಿಗಳ ಕ್ರೇಜು ಕಿಚ್ಚ ಮತ್ತು ಜಾಕ್ಗೆ ಕಿಕ್ಕೇರಿಸಿದೆ.