ರಾ ರಾ ರಕ್ಕಮ್ಮ.. ಹಾಡು ಕಿಚ್ಚು ಹಚ್ಚಿದೆ. ಕಿಕ್ಕೇರಿಸಿದೆ. ಯಕ್ಕ ಸಕ್ಕಾ.. ಯಕ್ಕ ಸಕ್ಕಾ.. ಯಕ್ಕ ಸಕ್ಕಾ.. ಎಲ್ಲಿ ನೋಡಿದರೂ ಅದೇ ಗುಂಗು.. ಮ್ಯಾಜಿಕ್ ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನಲ್ಲಿದೆಯೋ.. ನಕಾಶ್ ಅಜೀಝ್, ಸುನಿಧಿ ಚೌಹಾಣ್ ಕಂಠದಲ್ಲಿದೆಯೋ.. ಅನೂಪ್ ಭಂಡಾರಿ ಲಿರಿಕ್ಕಿನಲ್ಲಿದೆಯೋ.. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನಲ್ಲಿದೆಯೋ.. ಹಾಡು ಕಿಕ್ಕೇರಿಸಿರೋದು ಸತ್ಯ.
ಹಾಡು ರಿಲೀಸ್ ಆದ ದಿನವೇ ನಟಿ ವೈಷ್ಣವಿ ಗೌಡ ಹೆಜ್ಜೆ ಹಾಕಿದ್ದರು. ಈಗ ನೋಡಿದರೆ ಸ್ಟಾರ್‍ಗಳ ಸೈನ್ಯವೇ ಹಾಡಿಗೆ ಕುಣಿಯುತ್ತಿದೆ. ಪಟಾಕಿ ಪೋರಿ ಆಶಿಕಾ ರಂಗನಾಥ್, ಜಾನಿ ಮಾಸ್ಟರ್, ಪುಟ್ಟ ಪುಟ್ಟ ಮಕ್ಕಳೊಂದಿಗೆ ಸೃಜನ್ ಲೋಕೇಶ್.. ರಾರಾರಕ್ಕಮ್ಮ ಹಾಡಿಗೆ ಯಕ್ಕಾ ಸಕ್ಕಾ ಸ್ಟೆಪ್ ಹಾಕಿದ್ದಾರೆ. ಫ್ಯಾನ್ಸ್‍ಗಳ ಯಕ್ಕಸಕ್ಕ ಕಿಕ್ಕೂ ಜೋರಾಗಿಯೇ ಇದೆ.