ನಮ್ಮೂರಲ್ಲಿ ಅರಳೋ ಹೂವೆಲ್ಲ ಗುಡಿಯ ಸೇರಲ್ಲ..
ನಮ್ಮೂರಲ್ಲಿ ಹಗಲು ಇರುಳನ್ನೋ ಭೇದಾ ಏನಿಲ್ಲ..
ಸಂಗೀತಾ ಕಟ್ಟಿಯವರ ಈ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಹಾಡಿಗೆ ಸಾಹಿತ್ಯ ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಸಂಗೀತ ಬಿ.ಜೆ.ಭರತ್ ಅವರದ್ದು. ಇದು ವೀಲ್‍ಚೇರ್ ರೋಮಿಯೋ ಚಿತ್ರದ ಹಾಡು.
ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕಥೆ ಇಷ್ಟವಾಗಿದೆ. ಕಥೆ ಮತ್ತು ಟ್ರೀಟ್‍ಮೆಂಟ್ ವಿಭಿನ್ನವಾಗಿದ್ದರೆ ಏನಾಗಬೇಕಿತ್ತೋ.. ಅದೇ ಆಗಿದೆ. ಚಿತ್ರವನ್ನು ಕ್ಲಾಸ್ ಪ್ರೇಕ್ಷಕರು ಇಷ್ಪಪಟ್ಟು ನೋಡುತ್ತಿದ್ದಾರೆ.
ಅಂಧ ವೇಶ್ಯೆಯೊಬ್ಬಳನ್ನು ಪ್ರೀತಿಸುವ ವಿಕಲಾಂಗ ನಾಯಕನ ವಿಭಿನ್ನ ಲವ್ ಸ್ಟೋರಿ ಇದು. ರಾಮ್ ಚೇತನ್ ಮತ್ತು ಮಯೂರಿ ನಟಿಸಿರೋ ಚಿತ್ರಕ್ಕೆ ನಟರಾಜ್ ನಿರ್ದೇಶಕ. ಅವರಿಗಿದು ಮೊದಲ ಸಿನಿಮಾ. ಫಸ್ಟ್ ಸಿನಿಮಾದಲ್ಲೇ ಬೊಂಬಾಟ್ ಆಟವಾಡಿದ್ದಾರೆ. ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣದ ಸಿನಿಮಾ ಥಿಯೇಟರುಗಳಲ್ಲಿ ಪ್ರೇಕ್ಷಕರನ್ನು ಕರೆದು ತರುವಲ್ಲಿ ಯಶಸ್ವಿಯಾಗಿದೆ.