ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಒಟ್ಟಿಗೇ ನಟಿಸಿರುವ ಮೊದಲ ಸಿನಿಮಾ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗುತ್ತಿದೆ.
ಕುಶಾಲ್ ಗೌಡ ನಿರ್ದೇಶನದ ಚಿತ್ರವಿದು.
ಬಾಬಾ ಬುಡನ್‍ಗಿರಿ, ಕುದುರೆಮುಖ, ಚಿಕ್ಕಮಗಳೂರಿನಲ್ಲೆ ಹೆಚ್ಚು ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ವಿಭಿನ್ನ ಕಥೆಯಂತೂ ಇದೆ. ಡಾಲಿ ಬಾರ್ ಸಪ್ಲೈಯರ್ ಪಾತ್ರದಲ್ಲಿದ್ದರೆ, ಆದಿತಿ ಮಸಾಜ್ ಪಾರ್ಲರ್‍ನಲ್ಲಿ ಕೆಲಸ ಮಾಡೋ ಹುಡುಗಿಯ ಪಾತ್ರ ಮಾಡಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿಯಾಗುತ್ತದೆ. ಚಿತ್ರದ ಮೊದಲ ಪೋಸ್ಟರ್‍ನಲ್ಲಿ ಡಾಲಿ ಪುಟ್ಟ ಮಗುವಿನ ಜೊತೆ ಕುಳಿತಿರುವ ಪೊಸ್ಟರ್ ತೋರಿಸಿದ್ದರು. ಹಾಗಾದರೆ.. ಕಥೆ ಏನು..? ಆ ಕುತೂಹಲಕ್ಕೆ ಉತ್ತರ ಸೆಪ್ಟೆಂಬರ್ 9ಕ್ಕೆ ದೊರೆಯಲಿದೆ.
ನಟಿ ಭಾವನಾ ರಾಮಣ್ಣ ಈ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುತ್ತಿರೋದು ವಿಶೇಷ. ತ್ರಿವೇಣಿ ರಾವ್, ಪ್ರಕಾಶ್ ಬೆಳವಾಡಿ, ಯಶ್ವಂತ್ ಶೆಟ್ಟಿ ಮೊದಲಾದವರು ನಟಿಸಿರೊ ಚಿತ್ರಕ್ಕೆ ಶ್ರೀಹರಿ ನಿರ್ಮಾಪಕರು.