ಕಿಚ್ಚ ಸುದೀಪ್ ತಮ್ಮ ಕೆರಿಯರ್‍ನಲ್ಲೇ ಮೊತ್ತಮೊದಲ ಬಾರಿಗೆ ರೀಲ್ಸ್ ಮಾಡಿದರೆ.. ಫ್ಯಾನ್ಸ್ ಕುಣಿಯದೇ ಇರೋದು ಉಂಟಾ.. ಹಾಗೆಯೇ ಆಗಿದೆ ಪರಿಸ್ಥಿತಿ. ವಿಕ್ರಾಂತ್ ರೋಣ ಚಿತ್ರದ ರಕ್ಕಮ್ಮ ಸಾಂಗಿಗೆ ಸುದೀಪ್ ಸಖತ್ ಸ್ಟೆಪ್ ಹಾಕಿದ್ದಾರೆ. ಥೇಟು ಜಾಕ್ವೆಲಿನ್`ರಂತೆ..
ಇದು ಪ್ರಮೋಷನ್‍ನ ಹೊಸ ಸ್ಟೈಲು. ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಕನ್ನಡ ಹೇಳಿಕೊಟ್ಟು, ನಂತರ ಜಾಕ್ವೆಲಿನ್ ಅವರಿಗಾಗಿ ಗಡಂಗ್ ರಕ್ಕಮ್ಮ ಸಾಂಗಿಗೆ ಹೆಜ್ಜೆ ಹಾಕಿದ್ದಾರೆ.
ನನಗೆ ಡ್ಯಾನ್ಸ್ ಬರಲ್ಲ ಎನ್ನುವುದನ್ನು ಸುದೀಪ್ ಹಲವು ವೇದಿಕೆಗಳಲ್ಲಿ ಮುಚ್ಚು ಮರೆಯಿಲ್ಲದೆ ಹೇಳಿಕೊಂಡಿರೋದು ಎಲ್ಲರಿಗೂ ಗೊತ್ತು. ಆದರೆ, ಈ ಸ್ಟೆಪ್ ನೋಡಿದರೆ ಸುದೀಪ್ ಹೇಳಿದ್ದಾರೆ ಅನ್ನಿಸೋದು ಸತ್ಯ. ಅಷ್ಟರಮಟ್ಟಿಗೆ ಸುದೀಪ್ ಸ್ಟೆಪ್ಸ್ ಇದೆ.
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ನಿರೂಪ್ ಭಂಡಾರಿ, ನೀತು ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್.. ಮೊದಲಾದವರು ನಟಿಸಿರೋ ವಿಕ್ರಾಂತ್ ರೋಣದ ಹಾಡು ಈ ಗಡಂಗ್ ರಕ್ಕಮ್ಮ.. ಯಕ್ಕಾ ಸಕ್ಕಾ ಸಾಂಗು. ಅಂದಹಾಗೆ ಸುದೀಪ್ ಹೆಜ್ಜೆಯಿಟ್ಟ ಮೇಲೆ.. ಸ್ಟಾರ್‍ಗಳು ಬಿಡ್ತಾರಾ..? ಫ್ಯಾನ್ಸ್ ಬಿಡ್ತಾರಾ..? ಅವರದ್ದೂ ರೀಲ್ಸ್ ಶುರುವಾಗಿದೆ.. ಯಕ್ಕಸಕ್ಕ.. ಯಕ್ಕಸಕ್ಕ.. ಯಕ್ಕಾಸಕ್ಕಾ..
ಅಂದಹಾಗೆ ಶುರುವಾಗಿರೋ ಈ ಕ್ರೇಜಿನಿಂದ ಥ್ರಿಲ್ಲಾಗಿರೋದು ಯಾರು..? ಅನುಮಾನವೇ ಇಲ್ಲ. ಅದು ನಿರ್ಮಾಪಕ ಜಾಕ್ ಮಂಜು.