ರವಿಚಂದ್ರನ್ ಮತ್ತು ಡಾ.ರಾಜ್ ಕುಟುಂಬದ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ. ಆ ಬಾಂಧವ್ಯ ಈಗಲೂ ಮುಂದುವರೆಯುತ್ತಿದೆ. ಇದೀಗ ರವಿಚಂದ್ರನ್ ಅವರ 2ನೇ ಮಗ ವಿಕ್ರಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತ್ರಿವಿಕ್ರಮ್ ಸಿನಿಮಾ ಇದೇ ಜೂನ್ 24ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಚಾರಕ್ಕೆ ಖುದ್ದು ಶಿವಣ್ಣ ಎದ್ದು ನಿಂತಿದ್ದಾರೆ.
ತ್ರಿವಿಕ್ರಮ ಚಿತ್ರದ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ.. ಹಾಡನ್ನು ಖುದ್ದು ಶಿವಣ್ಣ ರಿಲೀಸ್ ಮಾಡಿದ್ದಾರೆ.
ವಿಕ್ರಂ ರವಿಚಂದ್ರನ್ ಚಿತ್ರದಲ್ಲಿ ತಮ್ಮ ತಾಯಿಗೆ ಮಮ್ಮಿ ಅರೇಜ್ಡ್ ಮ್ಯಾರೇಜ್ ಬೇಡ.. ಲವ್ ಮ್ಯಾರೇಜ್ ಆಗ್ತೀನಿ ಎಂದು ಹೇಳಿಕೊಂಡು ಹಾಡಿ ಕುಣಿಯುವ ಹಾಡಿದು. ವಿಕ್ರಂ ಜೊತೆ ಚಿತ್ರದಲ್ಲಿ ಆಕಾಂಕ್ಷಾ ಶರ್ಮ ನಾಯಕಿಯಾಗಿದ್ದಾರೆ. ತುಳಸಿ ಶಿವಮಣಿ ವಿಕ್ರಂ ತಾಯಿಯಾಗಿ ನಟಿಸಿದ್ದಾರೆ. ಚಿಕ್ಕಣ್ಣ, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ಶಿವಮಣಿ, ಆದಿ ಲೋಕೇಶ್.. ಸೇರಿದಂತೆ ಬೃಹತ್ ತಾರಾಬಳಗವೇ ಚಿತ್ರದಲ್ಲಿದೆ.
ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸಹನಾ ಮೂರ್ತಿ. ರೋಜ್ ಮತ್ತು ಲೀಡರ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ. ಸೋಮಣ್ಣ ನಿರ್ಮಾಣದ ಚಿತ್ರ ಗೌರಿ ಎಂಟರ್ಟೈನರ್ ಮೂಲಕ ರಿಲೀಸ್ ಆಗುತ್ತಿದೆ.