ಚಿತ್ರದ ಟೈಟಲ್ ಕ್ಷೇತ್ರಾಚಾರಿ. ಹೆಸರಿನ ಸೌಂಡಿಂಗ್ ಚೆನ್ನಾಗಿದೆ.
ಚಿತ್ರದಲ್ಲಿ ಕ್ಷೇತ್ರಾಚಾರಿ ಪಾತ್ರದಲ್ಲಿರೋದು ಗುಳ್ಟು ಖ್ಯಾತಿಯ ನವೀನ್. ಕ್ಷೇತ್ರಾಚಾರಿ ಎಂದರೆ ರೈತ ಎಂದರ್ಥ. ಸಂಸ್ಕøತದಲ್ಲಿ ರೈತನಿಗೆ ಕ್ಷೇತ್ರಾಚಾರಿ ಅನ್ನೋ ಪದವೂ ಇದೆ. ಆದರೆ ಚಿತ್ರದಲ್ಲಿ ಗುಳ್ಟು ನವೀನ್ ಅವರದ್ದು ಎಂಜಿನಿಯರ್ ಕಮ್ ರೈತನ ಪಾತ್ರ. ಪಾತ್ರದ ಹೆಸರು ಬಸವಾ.
ಇವರ ಎದುರು ನಾಯಕಿಯಾಗಿ ನಟಿಸಿರೋದು ಅರ್ಚನಾ ಜೋಯಿಸ್. ಕೆಜಿಎಫ್`ನಲ್ಲಿ ರಾಕಿಭಾಯ್ ಅಮ್ಮ ಲಕ್ಷ್ಮಿಯಾಗಿ ನಟಿಸಿರೋ ತಂದಾನಿತಾನೋ.. ತಾನಿತಂದಾನೊ.. ತಾನೇನೆನೆನೇನ.. ಅಮ್ಮ. ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ.
ಅರ್ಚನಾ ಎಂತಹ ಅದ್ಭುತ ಪ್ರತಿಭೆ ಅನ್ನೋಕೆ ಕೆಜಿಎಫ್ನ ಆ ಪಾತ್ರವೇ ಸಾಕು. ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನು ಅವರು ಆವಾಹಿಸಿಕೊಂಡಿದ್ದನ್ನು ನೋಡಿ ಚಿತ್ರಪ್ರೇಮಿಗಳೆಲ್ಲ ಶಹಬ್ಬಾಸ್ ಎಂದಿದ್ದಾರೆ. ಅವರು ಕ್ಷೇತ್ರಾಚಾರಿಯಲ್ಲಿ ಹೀರೋಯಿನ್ ಪಾತ್ರ ಮಾಡುತ್ತಿದ್ದಾರೆ.
ಶ್ರೀಕಾಂತ್ ಕಾಟಗಿ ನಿರ್ದೇಶನದ ಫಸ್ಟ್ ಮೂವಿ ಇದು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶ್ರೀಕಾಂತ್ ಕಾಟಗಿ, ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಬರೆದು ನಿರ್ದೇಶನ ಮಾಡಿದ್ದಾರೆ.ಕ್ಷೇತ್ರಾಚಾರಿಗೆ ರವಿ ಬಸ್ರೂರು ಸಂಗೀತವಿದೆ. ಸರಿಯಾದದ್ದಕ್ಕೆ..ಸರಿಯಾದ ಹೋರಾಟ ಎಂಬರ್ಥದ ಟ್ಯಾಗ್ಲೈನ್ ಇಟ್ಟುಕೊಂಡಿರೋ ಕ್ಷೇತ್ರಾಚಾರಿ ಚಿತ್ರಕ್ಕೆ ಅವರೂ ಸೇರಿದಂತೆ ಹಲವು ಗೆಳೆಯರು ಬಂಡವಾಳ ಹೂಡಿದ್ದಾರೆ.