ತರ್ಲೆ ನನ್ಮಗ.. ಶ್.. ಓಂ.. ಆಪರೇಷನ್ ಅಂತ.. ಸ್ವಸ್ತಿಕ್.. ಎ.. ಉಪೇಂದ್ರ.. ಸೂಪರ್.. ಉಪ್ಪಿ 2..
ಇವಿಷ್ಟೂ ಉಪೇಂದ್ರ ನಿರ್ದೇಶನದ ಚಿತ್ರಗಳು. ಇವುಗಳಲ್ಲಿ ಉಪ್ಪಿಯವರೇ ತೆಲುಗಿನಲ್ಲಿ ಡೈರೆಕ್ಷನ್ ಮಾಡಿದ ಓಂಕಾರಂ (ಓಂ ಚಿತ್ರದ ರೀಮೇಕ್) ಮತ್ತು ಕನ್ಯಾದಾನಂ ಚಿತ್ರಗಳಿಲ್ಲ. ಮಿಕ್ಕ 9 ಚಿತ್ರಗಳೂ ಸೂಪರ್ ಹಿಟ್ ಚಿತ್ರಗಳೇ. ಈಗ 10ನೇ ಸಿನಿಮಾ. ಚಿತ್ರದ ಟೈಟಲ್ ಏನು.. ಮೂರು ನಾಮನಾ.. ಯು ಅರ್ಥಾತ್ ನೀನಾ..? ನೀನು ಮತ್ತು ನಾನುನಾ..?
ಟೈಟಲ್ನ್ನು ಹೇಳೋಕೆ ಆಗಲ್ಲ ಬಿಡಿ.. ಆ ಚಿತ್ರಕ್ಕೀಗ ಮುಹೂರ್ತದ ಸಮಯ. ಜೂನ್ 3ನೇ ತಾರೀಕು ಸಿನಿಮಾ ಶುರುವಾಗುತ್ತಿದೆ. ಸಿನಿಮಾವನ್ನು ಕೆ.ಪಿ.ಶ್ರೀಕಾಂತ್ ಮತ್ತು ಲಹರಿ ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಗವಿಪುರ ಗುಟ್ಟಳ್ಳಿಯ ಬನಶಂಕರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಓಂಕಾರ ಹಾಕಲಿದ್ದಾರೆ ಉಪ್ಪಿ.