ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಗೋವಿಂದು ಮತ್ತು ಅವರ ತಂಡಕ್ಕೆ ಚಿತ್ರರಂಗದಿಂದ ಉತ್ತಮ ಬೆಂಬಲವೂ ಸಿಕ್ಕಿದೆ. ವಿರೋಧಗಳೂ ಎದುರಾಗಿವೆ. ಈ ನಿಟ್ಟಿನಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಜಯಮಾಲಾ, ಸುಂದರ್ ರಾಜ್.. ಮೊದಲಾದವರು ಗಂಭೀರ ಆರೋಪ ಮಾಡಿದ್ದಾರೆ. ಇವುಗಳಿಗೆಲ್ಲ ಖುದ್ದು ಸಾ.ರಾ.ಗೋವಿಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆರೋಪ ಮತ್ತು ಉತ್ತರಗಳ ವಿವರ ಇಲ್ಲಿದೆ.
ಆರೋಪ : ಫಿಲ್ಮ್ ಚೇಂಬರ್ ಶೌಚಾಲಯ ನಿರ್ಮಾಣಕ್ಕೆ 35 ಲಕ್ಷ ರೂ. ಖರ್ಚು ಮಾಡಿ ತಪ್ಪು ಲೆಕ್ಕ ಕೊಟ್ಟಿದ್ದಾರೆ.
ಉತ್ತರ : ಖರ್ಚಾಗಿರುವುದೇ 15 ಲಕ್ಷ. ಖರ್ಚಾಗಿರುವ 15 ಲಕ್ಷಕ್ಕೆ ಪಕ್ಕಾ ಲೆಕ್ಕಪತ್ರಗಳಿವೆ. ಸುಳ್ಳು ಆರೋಪ ಮಾಡಬೇಡಿ. ಒಬ್ಬರು 30 ಅಂತಾರೆ.. ಇನ್ನೊಬ್ಬರು 40 ಅಂತಾರೆ.. ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ ಸಂಸ್ಥೆಯನ್ನ. ಇದು ಸಾಂಸ್ಕøತಿ ಸಂಸ್ಥೆ ಎನ್ನುವುದನ್ನು ಮರೆಯಬೇಡಿ ಎಂದು ಝಾಡಿಸಿದರು.
ಮೊದಲ ಹಂತದ ಆರೋಪದಲ್ಲೇ ಸಿಟ್ಟಿಗೆದ್ದ ಸಾ.ರಾ.ಗೋವಿಂದು, ಚೇಂಬರ್‍ನಲ್ಲಿ ಹಣ ದುರುಪಯೋಗವಾಗಿದೆ ಅನ್ನೋವ್ರಿಗೆ ಉತ್ತರ ಕೊಟ್ಟರು. ಖರ್ಚಾಗಿರುವ ಪ್ರತಿ ಹಣಕ್ಕೂ ಲೆಕ್ಕವಿದೆ. ದಾಖಲೆಗಳಿವೆ. ಆ ಹಣದಲ್ಲೇ ಚಿತ್ರರಂಗದಲ್ಲಿ ಕಷ್ಟದಲ್ಲಿರುವ ಕಾರ್ಮಿಕರು, ಸಂತ್ರಸ್ತರಿಗೆ ನೆರವಾಗಿದ್ದೇವೆ. ಎಲ್ಲವೂ ದಾಖಲೆಗಳಲ್ಲಿಯೇ ಇದೆ ಎಂದರು ಸಾ.ರಾ.ಗೋವಿಂದು.
ಇದೇ ವೇಳೆ ತಮ್ಮ ವಿರುದ್ಧ ನಿಂತಿರುವ ಜಯಮಾಲಾ ಅವರ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಇದೇ ಜಯಮಾಲಾ ಅವರು ಅಧ್ಯಕ್ಷರಾಗಲು ಬಯಸಿದಾಗ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೆ. ಈಗ ಅದ್ಯಾಕೆ ಈ ರೀತಿ ಕೆಟ್ಟ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದರು ಸಾ.ರಾ.ಗೋವಿಂದು.
ಎಲೆಕ್ಷನ್‍ನಲ್ಲಿ ಸೋಲುತ್ತಿದ್ದೇವೆ ಎಂದು ಗೊತ್ತಾದ ತಕ್ಷಣ ಈ ರೀತಿಯಾಗಿ ತಲೆಬುಡವಿಲ್ಲದ ಆರೋಪ ಮಾಡಬಾರದು. ಚುನಾವಣೆ ಬರುತ್ತೆ. ಹೋಗುತ್ತೆ. ಸಂಸ್ಥೆಯ ಧ್ಯೇಯಗಳಷ್ಟೇ ಮುಖ್ ಎಂದರು ಸಾ.ರಾ.ಗೋವಿಂದು.