ಒಳ್ಳೆ ಹುಡ್ಗ ಪ್ರಥಮ್ ಇದ್ದಕ್ಕಿದ್ದಂತೆ ವಿದೇಶಕ್ಕೆ ಹಾರಿದ್ದಾರೆ. ಅದೂ ಲೊಕೇಷನ್ ನೋಡೋಕೆ. ಅಫ್‍ಕೋರ್ಸ್.. ಪ್ರಥಮ್ ಅವರೊಂದಿಗೆ ಅಣಜಿ ನಾಗರಾಜ್ ಕೂಡಾ ವಿದೇಶ ಸೇರಿದ್ದಾರೆ. ಕಲೈ ಕೂಡಾ ಅವರ ಜೊತೆಯಲ್ಲೇ ಇದ್ದಾರೆ.
ಒಂದು ಕಡೆ ನಟಭಯಂಕರ ಸಿನಿಮಾವನ್ನು ರಿಲೀಸ್ ಹೊತ್ತಿಗೆ ತಂದು ನಿಲ್ಲಿಸಿರೋ ಪ್ರಥಮ್, ಇನ್ನೊಂದು ಕಡೆ ಕರ್ನಾಟಕದ ಅಳಿಯ ಚಿತ್ರದ ಚಿತ್ರೀಕರಣ ಶುರು ಮಾಡಿದ್ದಾರೆ. ಕರ್ನಾಟಕದ ಅಳಿಯ ಚಿತ್ರ ಬಹುತೇಕ ನಡೆಯೋದು ವಿದೇಶದಲ್ಲಿ. ಒಂದಿಷ್ಟು ಪೋರ್ಷನ್ ಮಾತ್ರ ಕರ್ನಾಟಕದಲ್ಲಿ ನಡೆಯಲಿದೆ. ಒನ್ಸ್ ಎಗೇನ್ ಈ ಚಿತ್ರಕ್ಕೂ ಪ್ರಥಮ್ ಅವರೇ ಡೈರೆಕ್ಟರ್. ಸ್ಪರ್ಶ ರೇಖಾ, ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ನಟಿಸುತ್ತಿದ್ದು ಇನ್ನೂ ನಾಯಕಿಯ ಆಯ್ಕೆ ಆಗಿಲ್ಲ.
ನಟಭಯಂಕರ ಚಿತ್ರದ ಮೇಕಿಂಗ್ ನೋಡಿಯೇ ನಿರ್ಮಾಪಕರೊಬ್ಬರು ಬಂಡವಾಳ ಹೂಡಲು ಬಂದರು. ಅವರು ಯಾರು ಅನ್ನೋದನ್ನ ಶೀಘ್ರದಲ್ಲೇ ಹೇಳುತ್ತೇವೆ. ನಾಯಕಿಯನ್ನೂ ಕೂಡಾ ಫೈನಲ್ ಮಾಡುತ್ತೇವೆ. ಸದ್ಯಕ್ಕೆ ಬ್ಯಾಂಕಾಕ್, ಥೈಲ್ಯಾಂಡ್‍ನಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದಿದ್ದಾರೆ ಪ್ರಥಮ್.