ಸುಮಾರು ವರ್ಷಗಳ ಹಿಂದಿನ ಚಿತ್ರ ಇದು. 2012ರ ಫೆಬ್ರವರಿ 24ರಂದು ರಿಲೀಸ್ ಆಗಿತ್ತು. ಬಾಕ್ಸಾಫೀಸ್‍ನಲ್ಲಿ ಸಾಕಷ್ಟು ಸದ್ದನ್ನೂ ಮಾಡಿತ್ತು. ಅದೇ ಮೊದಲ ಬಾರಿಗೆ ಯಶ್ ಮತ್ತು ರಮ್ಯಾ ತೆರೆ ಮೇಲೆ ಕಾಣಿಸಿಕೊಂಡಿದ್ದರು. ರಾಧಿಕಾ ಕುಮಾರಸ್ವಾಮಿ ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದರು. ಅರ್ಜುನ್ ಜನ್ಯಾ ಸಂಗೀತ ನೀಡಿದ್ದ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿದ್ದವು.
ನಾಯಕ ಮತ್ತು ನಾಯಕಿಯ ಮಧ್ಯೆ ನಾಯಿ ಬಂದಾಗ.. ಅನ್ನೋ ಥೀಮಿನಲ್ಲೇ ಡಾ.ಸೂರಿ ಹೆಣೆದಿದ್ದ ಚೆಂದದ ಲವ್ ಸ್ಟೋರಿ ಈಗ ತೆಲುಗಿಗೆ ಹೋಗುತ್ತಿದೆ. ಕೆಜಿಎಫ್ ಸಕ್ಸಸ್ ಎಫೆಕ್ಟ್ ಕಾರಣ ಅನ್ನೋದನ್ನ ಬೇರೆ ಹೇಳಬೇಕಿಲ್ಲ.
ತೆಲುಗಿನಲ್ಲಿ ಈಗಾಗಲೇ ಲಕ್ಕಿ ಅನ್ನೋ ಸಿನಿಮಾ ಬಂದಿರೋದ್ರಿಂದ ಚಿತ್ರಕ್ಕೆ ಲಕ್ಕಿ ಸ್ಟಾರ್ ಅನ್ನೋ ಟೈಟಲ್ ಇಡಲಾಗಿದೆ. ಅಂದಹಾಗೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿಯೇ ಥಿಯೇಟರಿಗೆ ತರಲು ಚಿತ್ರ ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಆದರೆ.. 12 ವರ್ಷಗಳ ಹಳೆಯ ಸಿನಿಮಾ.. ಈಗಿನ ಪ್ರೇಕ್ಷಕರನ್ನು ರೀಚ್ ಆಗುವುದೇ ಎಂಬ ಪ್ರಶ್ನೆ ಎಲ್ಲರದ್ದು.