ವಿಕ್ರಾಂತ್ ರೋಣನ ಹವಾ ಬೀಸೋಕೆ ಶುರುವಾಗಿದೆ. ಅದರ ಮೊದಲ ಹಂತವಾಗಿ ಬಂದಿದ್ದೇ ಗಡಂಗ್ ರಕ್ಕಮ್ಮಾ ಹಾಡು. ಕನ್ನಡದಲ್ಲಿ ಮೊದಲು ರಿಲೀಸ್ ಮಾಡಿದ ನಂತರ ದಿನಕ್ಕೊಂದು ಭಾಷೆಯಲ್ಲಿ ರಿಲೀಸ್ ಮಾಡುತ್ತಿದೆ ವಿಕ್ರಾಂತ್ ರೋಣ ಟೀಮು. ಈಗ ತೆಲುಗಿನಲ್ಲೂ ರಿಲೀಸ್ ಆಗಿದೆ ಗಡಂಗ್ ರಕ್ಕಮ್ಮ ಸಾಂಗು.
ತೆಲುಗಿನಲ್ಲಿ ಈ ಹಾಡಿಗೆ ಧ್ವನಿ ನೀಡಿರೋದು ಮಂಗ್ಲಿ. ರಾಮಜೋಗಯ್ಯ ಶಾಸ್ತ್ರಿ ಕನ್ನಡದ ಹಾಡನ್ನು ತೆಲುಗಿಗೆ ಅನುವಾದಿಸಿದ್ದಾರೆ. ಮಂಗ್ಲಿಯ ವಾಯ್ಸು ಹಾಡಿನ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತ ಕನ್ನಡದಲ್ಲಿ ಹಾಡನ್ನು ನೋಡಿ ಮೆಚ್ಚಿದವರ ಸಂಖ್ಯೆ ಆಗಲೇ 50 ಲಕ್ಷ ದಾಟಿದೆ.