` ಚೈತ್ರಾ ಹಳ್ಳಿಕೇರಿ ಕೇಸಿನಲ್ಲಿ 25 ಕೋಟಿ ಮಿಸ್ಟರಿ ಏನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚೈತ್ರಾ ಹಳ್ಳಿಕೇರಿ ಕೇಸಿನಲ್ಲಿ 25 ಕೋಟಿ ಮಿಸ್ಟರಿ ಏನು?
Chaitra Hallikeri image

ನಟಿ ಚೈತ್ರಾ ಹಳ್ಳಿಕೇರಿ ಇತ್ತೀಚೆಗೆ ತಮ್ಮ ಪತಿ ಮತ್ತು ಮಾವನ ವಿರುದ್ಧ ವಂಚನೆಯ ದೂರು ಕೊಟ್ಟಿದ್ದರು. ತಮ್ಮ ಪತಿ ಬಾಲಾಜಿ ತಮ್ಮ ಒಡವೆಗಳನ್ನು ತಮಗೇ ಗೊತ್ತಿಲ್ಲದೆ ಅಡವಿಟ್ಟು ಮೋಸ ಮಾಡಿದ್ದಾರೆ ಎಂದು ದೂರಿದ್ದರು. ತಮ್ಮ ಅಕೌಂಟಿನ ಕೆವೈಸಿಯಲ್ಲಿ ತಮ್ಮ ಮೊಬೈಲ್ ನಂಬರ್ ಚೇಂಜ್ ಮಾಡಿಸಿ ತಮಗೆ ಮೋಸ ಮಾಡಿದ್ದಾರೆ ಎಂದಿದ್ದರು. ಇದಕ್ಕೆಲ್ಲ ಈಗ ಅವರ ಪತಿ ಉದ್ಯಮಿ ಬಾಲಾಜಿ ಪೋತರಾಜ್ ಉತ್ತರ ಕೊಟ್ಟಿದ್ದಾರೆ.

ತಮ್ಮ ಪತ್ನಿ ಮಾಡಿರುವ ಎಲ್ಲ ಆರೋಪಗಳೂ ಸುಳ್ಳು. ಅವರ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ. ನಾವಿಬ್ಬರೂ 4 ವರ್ಷಗಳಿಂದ ದೂರ ಇದ್ದೇವೆ ಎಂದಿದ್ದಾರೆ ಬಾಲಾಜಿ.

ಚೈತ್ರಾ ಅವರಿಗೆ 5 ಕೋಟಿ ಮೌಲ್ಯದ ಮನೆ, 50 ಲಕ್ಷದ ಕಾರು ಕೊಟ್ಟಿದ್ದೇನೆ. ಕೈತುಂಬಾ ದುಡ್ಡು ಕೊಟ್ಟಿದ್ದೇನೆ. ಆದರೆ ಅವರು 25 ಕೋಟಿ ಕೇಳುತ್ತಿದ್ದಾರೆ. ಅಷ್ಟೆಲ್ಲ ಕೊಡೋಕೆ ಆಗಲ್ಲ ಎಂದಿದ್ದಾರೆ ಬಾಲಾಜಿ ಪೋತರಾಜ್.

ಮದುವೆಯಾದ ಕೆಲವು ವರ್ಷಗಳ ನಂತರ ಚೈತ್ರಾ ಬದಲಾದರು. ಮಿಸೆಸ್ ಇಂಡಿಯಾ ಸ್ಪರ್ಧೆಗೆ ಹೋಗುತ್ತೇನೆ. ಫ್ಯಾಷನ್ ಶೋ ಮಾಡುತ್ತೇನೆ ಎಂದರು. ನಾನು ಬಿಸಿನೆಸ್ ಮ್ಯಾನ್. ಅದೆಲ್ಲ ನಮಗೆ ಸರಿ ಬರೋಲ್ಲ. ಬೇಡ ಎಂದಿದ್ದೆ. ಅವರು ಒಪ್ಪಲಿಲ್ಲ. ಆಗ ಡಿವೋರ್ಸ್‍ಗೆ ನಿರ್ಧಾರ ಮಾಡಿದೆ ಎಂದಿರುವ ಬಾಲಾಜಿ, ಚೈತ್ರಾ ಅವರ ಬೆನ್ನ ಹಿಂದೆ ಇನ್ಯಾರೋ ಇದ್ದಾರೆ ಎಂದು ಅನುಮಾನಿಸಿದ್ದಾರೆ.

ಆದರೆ ಮಕ್ಕಳ ವಿಚಾರದಲ್ಲಿ ಮಾತ್ರ ಇಬ್ಬರದ್ದೂ ಒಂದೇ ಮಾತು. ಚೈತ್ರಾ ಅವರ ಬಗ್ಗೆ ಬಾಲಾಜಿ ಅವರಾಗಲೀ, ಬಾಲಾಜಿ ಅವರ ಬಗ್ಗೆ ಚೈತ್ರಾ ಅವರಾಗಲೀ ತಪ್ಪು ಮಾತನಾಡಿಲ್ಲ. ಸದ್ಯಕ್ಕೆ ಮಕ್ಕಳಿಬ್ಬರೂ ಚೈತ್ರಾ ಬಳಿಯೇ ಇದ್ದಾರೆ.