` ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರ ಕಂಬಳ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರ ಕಂಬಳ
Veera Kambala

ಕಂಬಳ ಕ್ರೀಡೆ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಸಂಯೋಗದಲ್ಲಿ ಕಾಂತಾರಾ ಚಿತ್ರ ಸಿದ್ಧವಾಗುತ್ತಿದ್ದು,  ಅದರಲ್ಲಿ ಕಂಬಳದ ಬ್ಯಾಕ್‍ಗ್ರೌಂಡ್ ಸ್ಟೋರಿಯೇ ಇದೆ. ಈಗ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ. ಚಿತ್ರದ ಟೈಟಲ್ಲೇ ವೀರ ಕಂಬಳ. ನಿರ್ದೇಶನದ ಹೊಣೆ ಹೊತ್ತಿರುವುದು ಕನ್ನಡ ಚಿತ್ರರಂಗದ ದಿಗ್ಗಜ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ಅರುಣ್ ರೈ ತೋಡಾರ್ ಚಿತ್ರದ ನಿರ್ಮಾಪಕರು.

ಆದಿತ್ಯ ಮತ್ತು ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿದ್ದಾರೆ. ಆದಿತ್ಯ ಅವರ ತಾಯಿ ಮತ್ತು ಅಜ್ಜಿ ಇಬ್ಬರೂ ದಕ್ಷಿಣ ಕನ್ನಡದವರೇ. ತುಳು ಚೆನ್ನಾಗಿ ಗೊತ್ತು. ರಾಧಿಕಾ ಚೇತನ್ ಅವರಿಗೂ ತಮ್ಮ ಮಾತೃಭಾಷೆಯ ಚಿತ್ರದಲ್ಲಿ ನಟಿಸಿರೋದು ಖುಷಿ ಕೊಟ್ಟಿದೆ. ಹೌದು, ಚಿತ್ರ ತುಳುವಿನಲ್ಲೂ ಸಿದ್ಧವಾಗುತ್ತಿದೆ. ನಟ ಪ್ರಕಾಶ್ ರೈ ಕೂಡಾ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ನಿರ್ಮಾಪಕ ಅರುಣ್ ರೈ ತೋಡಾರ್ ಅವರ ಊರಿನಲ್ಲಿ ಕಂಬಳವಿತ್ತಂತೆ.  ಅದಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರನ್ನು ಕರೆತಂದರೆ ಚೆನ್ನಾಗಿರುತ್ತೆ ಎಂದರಂತೆ ಊರಿನವರು. ನಂತರ ಬಾಬು ಸರ್ ನಮ್ಮ ಊರಿಗೆ ಬಂದರು. ಅಲ್ಲಿಂದ ಚಿತ್ರ ಶುರುವಾಯಿತು ಎಂದು ಚಿತ್ರ ಶುರುವಾದ ಹಿನ್ನೆಲೆ ಹೇಳಿದ್ದು ನಿರ್ಮಾಪಕ ಅರುಣ್ ರೈ ತೋಡಾರ್