ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿರೋ ರಾಗಿಣಿ ದ್ವಿವೇದಿ 32 ತುಂಬಿ 33ಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬವನ್ನು ಅವರು ವಿಶೇಷವಾಗಿ ಆಚರಿಸಿಕೊಂಡಿದ್ದು ತಮ್ಮ ಟ್ರಸ್ಟ್‍ನಲ್ಲಿ. ವೃದ್ಧರು ಮತ್ತು ಮಂಗಳಮುಖಿಯರಿಗೆ ಸಹಾಯ ಮಾಡುವ ಮೂಲಕ.
ಸಾರಿ ಕರ್ಮ ರಿಟನ್ರ್ಸ್ ಚಿತ್ರದಲ್ಲಿ ನಟಿಸುತ್ತಿರೋ ರಾಗಿಣಿ, ನಿರ್ಮಾಪಕ ಕೆ.ಮಂಜು ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇಡೀ ಚಿತ್ರತಂಡ ರಾಗಿಣಿ ಅವರಿಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.