ಅವಳಿಗೆ ಕಣ್ಣು ಕಾಣಲ್ಲ. ಮನೆಯ ಬಡತನದಿಂದಾಗಿ ವೇಶ್ಯಾವೃತ್ತಿಗೆ ಇಳಿದಿದ್ದಾಳೆ. ಇವನಿಗೆ ವಿಚಿತ್ರ ಕಾಯಿಲೆ. ದೇಹದ ಕೆಳಭಾಗ ಮತ್ತು ಕೈಗಳು ಮೂವ್ ಮೆಂಟ್ ಆಗಲ್ಲ.
ಕಾಮ ಪ್ರೇಮ ಎರಡನ್ನೂ ಅರಸಿ ವೇಶ್ಯಾಗೃಹಕ್ಕೆ ಹೋಗುವ ನಾಯಕ.. ಮಗನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ತಂದೆ. ಅಲ್ಲಿ ಶುರುವಾಗುವ ಅವಳು ಮತ್ತು ಅವನ ಪ್ರೀತಿ.
ಕಥೆ ಕೇಳಲಿಕ್ಕೇ ವ್ಹಾವ್ ಎನಿಸಿದರೆ.. ಅದರಲ್ಲಿರೋ ವಿಭಿನ್ನತೆಯೇ ಕಾರಣ. ಅಂದಹಾಗೆ ನಿರ್ದೇಶಕ ನಟರಾಜ್ ಅವರಿಗೆ ಈ ಕಥೆ ಹೊಳೆದಿದ್ದು ಹೇಗೆ?
ನ್ಯಾಷನಲ್ ಜಿಯಾಗ್ರಫಿಯಲ್ಲಿ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ತಂದೆಯೊಬ್ಬ ಮಗನನ್ನು ವೇಶ್ಯಾಗೃಹಕ್ಕೆ ಕರೆದೊಯ್ಯುತ್ತಾನೆ. ಮಗನಿಗೆ ಲೈಂಗಿಕ ಅನುಭವ ಸಿಗಲಿ ಎಂಬ ಕಾರಣಕ್ಕೆ ಹಾಗೆ ಮಾಡುವ ಆ ದೃಶ್ಯ ಬೆರಗು ಹುಟ್ಟಿಸಿತು. ಅದನ್ನು ನಮ್ಮಲ್ಲಿ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆ ದೃಶ್ಯ ನನ್ನನ್ನು ಕಾಡೋಕೆ ಶುರು ಮಾಡಿತು. ಆಗ ಹುಟ್ಟಿದ ಎಳೆಯೇ ಈ ಕಥೆ. ಒಂದು ಮನಕಲಕುವ ಕಥೆಗೆ ಹಾಸ್ಯದ ಸ್ಪರ್ಶ ಕೊಟ್ಟು ಸಿದ್ಧ ಮಾಡಿದ ಕಥೆಯೇ ವೀಲ್ಚೇರ್ ರೋಮಿಯೋ ಎನ್ನುತ್ತಾರೆ ನಟರಾಜ್.
ರಾಮ್ ಚೇತನ್, ಮಯೂರಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಗಿರೀಶ್.. ಹೀಗೆ ಚಿತ್ರದಲ್ಲಿರೋ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಗಿಸುತ್ತಲೇ ಕಣ್ಣಲ್ಲಿ ನೀರು ತುಂಬಿಸೋ ನನ್ನ ಚಿತ್ರಕ್ಕಿದೆ ಎನ್ನುವ ಕಾನ್ಫಿಡೆನ್ಸ್ ನಟರಾಜ್ ಅವರದ್ದು. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.