ಅವನ ಹೆಸರು ಶಂಕರ್. ಊರಿಗೆಲ್ಲ ಕ್ವಾಟ್ಲೆ ಕೊಡೋ.. ಕಿರಿಕ್ ಮಾಡೋ.. ಹುಡುಗ. ಹೀಗಾಗಿಯೇ ಅವನು ಕಿರಿಕ್ ಶಂಕರ. ಅವಳು ಸಿಕ್ಕಾಪಟ್ಟೆ ಬೋಲ್ಡು. ಲೈಫಲ್ಲಿ ಸೀರಿಯಸ್‍ನೆಸ್ ಇಲ್ಲದೇ ಅವರಿಬ್ಬರೂ ಲವ್ ಮಾಡ್ತಾ ಇರೋವಾಗ ಅದೊಂದು ಘಟನೆ ನಡೆಯುತ್ತೆ. ಅಲ್ಲಿಂದ ಇಡೀ ಕಥೆ ಫುಲ್ ಚೇಂಜ್. ಕಿರಿಕ್ ಶಂಕರನ ಕಥೆಯೇ ಇದು.
ಚಿತ್ರದಲ್ಲಿ ನನ್ನದು ಸೀರಿಯಸ್‍ನೆಸ್ ಇಲ್ಲದ ಪಾತ್ರ ಎನ್ನುವ ಯೋಗಿ.. ಎಲ್ಲ ಟೈಮೂ ಹಾಗೇ ಇರಲ್ಲ ಎನ್ನುವ ಮೆಸೇಜ್ ಇಟ್ಟುಕೊಂಡೇ ಸಿನಿಮಾ ಮಾಡಿದ್ದೇವೆ. ಒಂದು ನೀಟ್ ಸಿನಿಮಾ ಎನ್ನುತ್ತಾರೆ. ನಾಯಕಿ ಅದ್ವಿಕಾಗೆ ಇದು ಫಸ್ಟ್ ಮೂವಿ. ನಿರ್ದೇಶಕ ಅನಂತರಾಜು ಅವರಿಗೂ ಇದು ಪ್ರಥಮ ಪ್ರಯತ್ನ. ಆದರೆ ಸಿನಿಮಾವನ್ನು ಬಹಳ ನೀಟ್ ಆಗಿ ಮಾಡಿದ್ದಾರೆ ಎನ್ನೋ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಯೋಗಿ.
ಎಂ.ಎನ್.ಕುಮಾರ್ ನಿರ್ಮಾಣದ ಸಿನಿಮಾ ಇದು. 150ರಿಂದ 200 ಥಿಯೇಟರುಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಕುಮಾರ್. ಅಂದಹಾಗೆ ಚಿತ್ರದಲ್ಲಿ ಸಂಕಲನಕಾರ ನಾಗೇಂದ್ರ ಅರಸ್ ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿ ನಟಿಸಿದ್ದಾರೆ. ಅದು ಥ್ರಿಲ್ಲಿಂಗ್ ಎನ್ನುತ್ತಾರೆ ಕುಮಾರ್.ನ