ಕಿಂಗ್ ಆಫ್ ಗುಡ್ ಟೈಮ್ಸ್ ಎಂದರೆ ಕನ್ನಡಿಗರ ಕಣ್ಣ ಮುಂದೆ ಥಟ್ಟಂತ ಬರೋದು ವಿಜಯ್ ಮಲ್ಯ. ಅದು ಮಲ್ಯ ಅವರ ಟ್ಯಾಗ್‍ಲೈನ್ ಕೂಡಾ ಆಗಿತ್ತು. ಆದರೆ.. ಇನ್ನು ಮುಂದೆ ಕ್ವೀನ್ ಆಫ್ ಗುಡ್ ಟೈಮ್ಸ್ ಎಂದರೆ ಥಟ್ಟಂತ ಕಣ್ಣ ಮುಂದೆ ಬರಬೇಕಿರೋದು ಗಡಂಗ್ ರಕ್ಕಮ್ಮ ಅಲಿಯಾಸ್ ಜಾಕ್ವೆಲಿನ್ ಫರ್ನಾಂಡಿಸ್.
ವಿಕ್ರಾಂತ್ ರೋಣ ಚಿತ್ರದ ಈ ಸ್ಪೆಷಲ್ ಸಾಂಗು ನೋಡಿದವರ ಎದೆಯೊಳಗೆ ಕಿಕ್ಕೇರಿಸಿರುವುದಂತೂ ಸತ್ಯ. ಹಾಡು.. ಮ್ಯೂಸಿಕ್ಕು.. ಲಿರಿಕ್ಸು.. ಎಲ್ಲವೂ ಹಾಗೆಯೇ ಇದೆ. ಕಿಕ್ಕೇರಿಸಿರೋದು ಗಡಂಗು ರಕ್ಕಮ್ಮ.
ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ರಕ್ಕಮ್ಮನ ಜೊತೆ 300 ಡ್ಯಾನ್ಸರ್ಸ್ ಸ್ಟೆಪ್ ಹಾಕಿದ್ದಾರಂತೆ. ಇದೊಂದೇ ಹಾಡಿಗಾಗಿ ನಿರ್ಮಾಪಕ ಜಾಕ್ ಮಂಜು ಖರ್ಚು ಮಾಡಿರೋದು 5 ಕೋಟಿಯಂತೆ.
3ಡಿಯಲ್ಲೂ ರಿಲೀಸ್ ಆಗುತ್ತಿರುವ, ಇಂಗ್ಲಿಷ್‍ನಲ್ಲೂ ಬರುತ್ತಿರೋ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ, ನೀತು ಅಶೋಕ್ ಪ್ರಮುಖ ಪಾತ್ರದಲ್ಲಿರೋ ಚಿತ್ರದಲ್ಲಿ ವಿಕ್ರಾಂತ್ ರೋಣ ಪಾತ್ರದಲ್ಲಿರೋದು ಕಿಚ್ಚ. ಈಗಾಗಲೇ ಚಿತ್ರದ ಪ್ರಮೋಷನ್ ಶುರುವಾಗಿದ್ದು, ವಿದೇಶದ ಹಕ್ಕುಗಳೂ ಸೇಲ್ ಆಗಿ ಹೋಗಿವೆ.