ಲೂಸ್ ಮಾದ ಯೋಗಿ ಮತ್ತು ಅದ್ವಿಕಾ ನಟಿಸಿರೋ ಸಿನಿಮಾ ಕಿರಿಕ್ ಶಂಕರ್. ಕಿರಿಕ್ ಶಂಕರ್ ಇದೇ ಮೇ 27ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಟ್ರೇಲರ್ನ್ನು ಖ್ಯಾತ ನಿರ್ದೇಶಕ ಆರ್.ಚಂದ್ರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ನನ್ನ ಮೊದಲ ಚಿತ್ರದಿಂದಲೂ ನನಗೆ ಬೆನ್ನೆಲುಬಾಗಿ ನಿಂತಿದ್ದವರು ಕುಮಾರಣ್ಣ. ಅವರು ಈಗ ಸಿನಿಮಾ ಮಾಡು ಎಂದರೂ ನಾನು ಮಾಡಲು ಸಿದ್ಧ ಎಂದರು ಆರ್.ಚಂದ್ರು. ಅಂದಹಾಗೆ ಚಂದ್ರು ಈ ಮಾತು ಹೇಳಿದ್ದು ಎಂ.ಎನ್.ಕುಮಾರ್ ಅವರ ಬಗ್ಗೆ. ಕಿರಿಕ್ ಶಂಕರ್ ಚಿತ್ರದ ನಿರ್ಮಾಪಕರು ಅವರೇ.. ಎಂ.ಎನ್.ಕುಮಾರ್.
ಅಣ್ಣಾವ್ರ ಬ್ಯಾನರ್ ಬಿಟ್ಟರೆ ನಾನು ನಟಿಸಿದ ಅತೀ ದೊಡ್ಡ ಬ್ಯಾನರ್ ಇದೇ ಎಂದವರು ಯೋಗಿ. ಅನಂತರಾಜು ಚಿತ್ರದ ನಿರ್ದೇಶಕರು.
ಏಪ್ರಿಲ್ನಲ್ಲಿಯೇ ರಿಲೀಸ್ ಮಾಡೋಕೆ ಸಿದ್ಧವಾಗಿದ್ದೆ. ಆದರೆ ಒಂದರ ಹಿಂದೊಂದು ತುಂಬಾ ಚಿತ್ರಗಳು ರಿಲೀಸ್ ಆದವು. ಹೀಗಾಗಿ ಮುಂದೆ ಹೋಗಿ ಈಗ ರಿಲೀಸ್ ಮಾಡುತ್ತಿದ್ದೇವೆ ಎಂದರು ಎಂ.ಎನ್.ಕುಮಾರ್. ವೀರ್ ಸಮರ್ಥ್ ನಿರ್ದೇಶನದ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಈ ಹಾಡುಗಳೇ ಚಿತ್ರವನ್ನು ಪ್ರಮೋಟ್ ಮಾಡುತ್ತಿವೆ.