ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ತಮ್ಮ ಎರಡು ಚಿತ್ರಗಳ ಪ್ರಮೋಷನ್ನಲ್ಲಿ ಕಾಣಿಸಿಕೊಂಡಿದ್ದರು. ಸಕುಟುಂಬ ಸಮೇತ ಮತ್ತು 777 ಚಾರ್ಲಿ ಚಿತ್ರದ ಕಾರ್ಯಕ್ರಮಗಳಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ನೋಡಿದ್ದವರು ವಾಟ್ ಈಸ್ ದಿಸ್ ಎಂದಿದ್ದರು. ಅಷ್ಟು ದಪ್ಪಗಾಗಿದ್ದರು ರಕ್ಷಿತ್ ಶೆಟ್ಟಿ. ಏನಿಲ್ಲವೆಂದರೂ 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು ರಕ್ಷಿತ್ ಶೆಟ್ಟಿ. ಈಗ ಅವರ ಡುಮ್ಮನಾಗಿದ್ದರ ಹಿಂದಿನ ಸತ್ಯ ಹೊರಬಿದ್ದಿದೆ. ರಕ್ಷಿತ್ ಅವರನ್ನು ಇಷ್ಟು ಡುಮ್ಮಗಾಗಿಸಿದ್ದು ನಿರ್ದೇಶಕ ಹೇಮಂತ್ ರಾವ್ ಅವರು ಅನ್ನೋ ಸತ್ಯ ಗೊತ್ತಾಗಿದೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಹೇಮಂತ್ ರಾವ್ ನಿರ್ದೇಶನದಲ್ಲಿ ಮತ್ತೊಮ್ಮೆ ರಕ್ಷಿತ್ ನಟಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ.. ಚಿತ್ರದ ಚಿತ್ರೀಕರಣ ಈಗಾಗಲೇ ಶೇ.50ರಷ್ಟು ಕಂಪ್ಲೀಟ್ ಆಗಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಕಾಲೇಜು ಹುಡುಗ. ಸ್ಲಿಮ್ & ಸ್ಮಾರ್ಟ್. ಇನ್ನು ಬಾಕಿಯಿರೋ ಚಿತ್ರೀಕರಣಕ್ಕೆ ರಕ್ಷಿತ್ ಶೆಟ್ಟಿ ಇನ್ನೊಂದ್ ಹತ್ತು ವರ್ಷ ದೊಡ್ಡವರಾಗಬೇಕು. ಒಂದಿಷ್ಟು ಅಂಕಲ್ ಲುಕ್ಕೂ ಬೇಕು. ಸಾಲ್ಟ್ & ಪೆಪ್ಪರ್ ಗಡ್ಡ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತೂಕ ಒಂದಿಷ್ಟು ಹೆಚ್ಚಾಗಬೇಕು. ಅದೆಲ್ಲದರ ಫಲಿತಾಂಶವೇ ರಕ್ಷಿತ್ ಶೆಟ್ಟಿಯವರ ಈ ಲುಕ್ಕು.
ಜೂನ್ 10ಕ್ಕೆ 777 ಚಾರ್ಲಿ ರಿಲೀಸ್ ಆಗುತ್ತಿದೆ. ಆ ಚಿತ್ರದ ಪ್ರಮೋಷನ್ ಮುಗಿಸಿದ ನಂತರ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆಯೆಲ್ಲೋ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮನು ಹೆಸರಿನ ಪಾತ್ರ ಮಾಡುತ್ತಿದ್ದು, ರಕ್ಷಿತ್ ಎದುರು ಹೀರೋಯಿನ್ ಆಗಿರೋದು ರುಕ್ಮಿಣಿ ವಸಂತ್. ಅಂದಹಾಗೆ.. ರುಕ್ಮಿಣಿ ವಸಂತ್ ಗೆಟಪ್ ಕೂಡಾ ಚೇಂಜ್ ಆಗಲೇಬೇಕಲ್ವಾ..? ಹೇಮಂತ್ ರಾವ್ ಅವರಿಗ್ಯಾವ ಲುಕ್ ಕೊಟ್ಟಿದ್ದಾರೋ.. ಅವರೇ ಹೇಳಬೇಕು.