ಕೆಜಿಎಫ್ ಚಾಪ್ಟರ್ 2 ದಾಖಲೆಗಳ ಬೇಟೆ ಮುಗಿದಿಲ್ಲ. ಈಗಾಗಲೇ 1210 ಕೋಟಿ ಮುಟ್ಟಿರುವ ಬಾಕ್ಸಾಫೀಸ್ ಕಲೆಕ್ಷನ್ ಇಂಡಿಯಾ ಲೆವೆಲ್‍ನಲ್ಲಿ ಹೊಸ ದಾಖಲೆಯನ್ನೇ ಬರೆದಾಗಿದೆ. ಈಗ ಯಶಸ್ವೀ 6ನೇ ವಾರಕ್ಕೆ ಕಾಲಿಟ್ಟಿದೆ. ಇದರ ಜೊತೆ 50ನೇ ದಿನ ಪೂರೈಸುವತ್ತಲೂ ದಾಪುಗಾಲಿಟ್ಟಿದೆ.
ಒಟಿಟಿಯಲ್ಲಿ 199 ರೂ.ಗೆ ಪೇ & ವ್ಯೂಗೆ ಲಭ್ಯವಿದ್ದರೂ ಥಿಯೇಟರಿಗೆ ಬರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. 6ನೇ ವಾರದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2.
ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಪ್ರಧಾನ ಪಾತ್ರದಲ್ಲಿರೋ ಕೆಜಿಎಫ್ ಚಾಪ್ಟರ್ 2 ನಿರ್ದೇಶಕ ಪ್ರಶಾಂತ್ ನೀಲ್ ಫುಲ್ ಖುಷಿಯಾಗಿದ್ದಾರೆ. ಎಲ್ಲರಿಗಿಂತಲೂ ಹೆಚ್ಚು ಖುಷಿಯಾಗಿರೋದು ಹೊಂಬಾಳೆ ಮತ್ತು ವಿಜಯ್ ಕಿರಗಂದೂರು. ಇತ್ತ ರಿಲೀಸ್ ಆದ ಪ್ರತಿ ಭಾಷೆಯಲ್ಲೂ ವಿತರಕರಿಗೆ ಅತೀ ಹೆಚ್ಚು ಶೇರ್ ಕೊಟ್ಟ ದಾಖಲೆಯೂ ಕೆಜಿಎಫ್‍ನದ್ದೇ.