ರಿಷಬ್ ಶೆಟ್ಟಿ ಚಿತ್ರಗಳಲ್ಲಿ ಕತೆಯ ಜೊತೆಗೆ ಹಾಡುಗಳೂ ಕೇಳುವಂತಿರುತ್ತವೆ ಹಾಗೂ ನೋಡುವಂತಿರುತ್ತವೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಜ್ಯೂ.ಮೊನಾಲಿಸಾ ಹಾಡು ಕೂಡಾ ಅಷ್ಟೆ.. ನೋಡುವಂತಿದೆ.. ಕೇಳುವಂತಿದೆ. ಮೊನಾಲಿಸಾ ನಗುವಿಗೆ ನೀವೂ ಬಿದ್ದರೆ.. ರಿಷಬ್ ಶೆಟ್ಟರು ಬೇಜಾರಾಗಬಹುದು. ಅವರಾಗಲೇ.. ಲವ್ವಲ್ಲಿ ಬಿದ್ದಾಗಿದೆ..
ವಾಸುಕಿ ವೈಭವ್ ಸಂಗೀತದ ಜೊತೆಗೆ ಹಾಡನ್ನೂ ಹಾಡಿದ್ದಾರೆ. ಎದೆಗೇ ತಟ್ಟುವಂತೆ. ಚೆಂದದ ಕೊರಿಯೋಗ್ರಫಿಯಲ್ಲಿ ತುಂಟತನವಿದೆ. ಗಿರಿಕನ್ಯೆಗಾಗಿ ದಾರಿ ತಪ್ಪಿದ ಮಗನಾಗುವ ಹರಿಗೆ ಅನುರಾಗ ಅರಳಿದ ಕಥೆ ಹಾಡಿನಲ್ಲಿದೆ. ತ್ರಿಲೋಕ್ ತ್ರಿವಿಕ್ರಮ ಪೆನ್ನಿನಲ್ಲಿ ತುಂಟ ಹುಡುಗನ ಭಾವನೆಗಳನ್ನೆಲ್ಲ ತಂದು ಸುರಿದಿದ್ದಾರೆ.
ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನವಿದೆ. ರಿಷಬ್ ಶೆಟ್ಟಿ ಹೀರೋ ಆಗಿದ್ದು ತಪಸ್ವಿನಿ ಪೂಣಚ್ಚ, ರಚನಾ ಇಂದರ್ ನಾಯಕಿಯರು.