ಸನ್ನಿಲಿಯೋನ್ ಅದೆಷ್ಟು ಅಭಿಮಾನಿಗಳನ್ನು ಖುಷಿಪಡಿಸಿದ್ದಾರೋ.. ಅಂತಹ ಸನ್ನಿಲಿಯೋನ್‍ರನ್ನು ಖುಷಿಪಡಿಸಿದ್ದು ಮಂಡ್ಯದ ಹೈಕ್ಳು. ಇತ್ತೀಚೆಗೆ 41ನೇ ವರ್ಷಕ್ಕೆ ಕಾಲಿಟ್ಟ ಸನ್ನಿಲಿಯೋನ್ ಹುಟ್ಟುಹಬ್ಬವನ್ನು ಮಂಡ್ಯದ ಸನ್ನಿ ಫ್ಯಾನ್ಸ್ ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಿದ್ದರು.
ಅದನ್ನು ಥ್ರಿಲ್ಲಾಗಿ ಹೇಳಿಕೊಂಡಿದ್ದ ಬೆಂಗಳೂರಿಗೆ ಬಂದಿದ್ದರು. ಕನ್ನಡದ ಚಾಂಪಿಯನ್ ಸಿನಿಮಾದ ಸ್ಪೆಷಲ್ ಸಾಂಗ್‍ನಲ್ಲಿ ಸನ್ನಿಲಿಯೋನ್ ಡ್ಯಾನ್ಸ್ ಮಾಡುತ್ತಿದ್ದು, ಆ ಹಾಡಿನ ಶೂಟಿಂಗಿಗೆ ಬಂದಿದ್ದರು ಸನ್ನಿ. ಚಾಂಪಿಯನ್ ಚಿತ್ರದಲ್ಲಿ ಆದಿತಿ ಪ್ರಭುದೇವ, ಸಚಿನ್ ಧನ್‍ಪಾಲ್ ನಾಯಕಿ, ನಾಯಕರಾಗಿದ್ದಾರೆ. ಶಿವರಾಜ್ ಶಿಂಧೆ ನಿರ್ದೇಶನದ ಚಿತ್ರವಿದು.
ಡಿಂಗರ್‍ಬಿಲ್ಲಿ ಹಾಡಿನ ಲಿರಿಕಲ್ ವಿಡಿಯೋವನ್ನೂ ರಿಲೀಸ್ ಮಾಡಲಾಗಿದೆ. ಇದೇ ವೇಳೆ ಮಾತನಾಡಿದ ಸನ್ನಿ ಲಿಯೋನ್ ಶಿವು ಬೇರ್ಗಿ ಅವರ ಸಾಹಿತ್ಯವನ್ನೂ ಮೆಚ್ಚಿಕೊಂಡರು. ಶಶಾಂಕ್ ಮತ್ತು ಇಂದು ನಾಗರಾಜ್ ಅವರ ಗಾಯನವನ್ನೂ ಮೆಚ್ಚಿಕೊಂಡರು. ಅಜನೀಶ್ ಲೋಕನಾಥ್ ಮ್ಯೂಸಿಕ್ಕೂ ಸನ್ನಿಗೆ ಇಷ್ಟವಾಗಿತ್ತು. ಅಭಿಮಾನಿಗಳು ತಮ್ಮ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ ರೀತಿ ಖುಷಿ ಕೊಟ್ಟಿತು ಎಂದ ಸನ್ನಿ, ಅಭಿಮಾನಿಯೊಬ್ಬ ತಮ್ಮ ಹೆಸರಿನಲ್ಲಿ ಮಟನ್ ಸ್ಟಾಲ್ ತೆಗೆದಿರುವುದನ್ನು ತಿಳಿದು ಖುಷಿಯಾದರು. ಆದರೆ ನಾನು ಪ್ಯೂರ್ ವೆಜಿಟೇರಿಯನ್ ಎಂದರು. ಅಭಿಮಾನಿಯೊಬ್ಬನ ಎದೆ ಮೇಲೆ ಆಟೋಗ್ರಾಫ್ ಕೊಟ್ಟರು. ಟೋಟ್ಟಲ್ಲಿ.. ಸನ್ನಿ ಖುಷ್ ಹುವಾ.