` ಗರುಡನ ಅಡ್ಡಾದಲ್ಲಿ ಮೂವರು ಹೀರೋಯಿನ್ಸ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗರುಡನ ಅಡ್ಡಾದಲ್ಲಿ ಮೂವರು ಹೀರೋಯಿನ್ಸ್..!
Garuda Movie Image

ಒಬ್ಬರು ಕಾಮ್ನಾ ಜೇಠ್ಮಲಾನಿ. ಕನ್ನಡದಲ್ಲಿ ಈ ಹಿಂದೆ ಯುಗಾದಿ, ಆಗ್ರಜ ಚಿತ್ರದಲ್ಲಿ ನಟಿಸಿದ್ದವರು.

ಮತ್ತೊಬ್ಬರು ಐಂದ್ರಿತಾ ರೇ. ಮಗದೊಬ್ಬರು ಆಶಿಕಾ ರಂಗನಾಥ್. ಈ ಮೂವರೂ ಇರೋ ಚಿತ್ರಕ್ಕೆ ಹೀರೋ ಸಿದ್ಧಾರ್ಥ ಮಹೇಶ್. ಇದು ಗರುಡ ಚಿತ್ರದ ತಾರಾಗಣ.

ಹೀರೋನನ್ನ ಇಬ್ಬರು ಲವ್ ಮಾಡ್ತಾರೆ. ಐಂದ್ರಿತಾ ಮತ್ತು ಆಶಿಕಾ. ಇಬ್ಬರಲ್ಲಿ ಸಿದ್ಧಾರ್ಥ ಯಾರಿಗೆ ಸಿಗ್ತಾರೆ ಅನ್ನೋದು ಗೊತ್ತಾಗೋದು ಸಿನಿಮಾ ನೋಡಿದಾಗಲೇ. ಕಾಮ್ನಾ ಜೇಠ್ಮಲಾನಿ ಹೀರೋಗೆ ಅತ್ತಿಗೆಯ ಪಾತ್ರ ಮಾಡಿದ್ದಾರೆ. ಈ ಅತ್ತಿಗೆಯ ತಂಗಿಯೇ ಆಶಿಕಾ ರಂಗನಾಥ್.

ಹೀರೋಗೆ ಅಮ್ಮ ಇರಲ್ಲ. ಅತ್ತಿಗೆಯೇ ಎಲ್ಲ ಆಗಿರುತ್ತಾರೆ. ಆ ಅತ್ತಿಗೆಗೆ ಗೊತ್ತಾಗದಂತೆ ಮನೆಯಲ್ಲಿ ಜಗಳವಾಡುತ್ತಾ.. ಹೊರಗೆ ಲವ್ ಮಾಡೋ ಹುಡುಗನ ಪಾತ್ರ ನನ್ನದು ಎನ್ನುತ್ತಾರೆ ಸಿದ್ಧಾರ್ಥ. ಚಿತ್ರದಲ್ಲಿ ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಎಲ್ಲವೂ ಇದೆ. ನಿರ್ದೇಶಕ ಧನುಕುಮಾರ್. ಚಿತ್ರದ ಕಥೆಗಾರ ಕೂಡಾ ಸಿದ್ಧಾರ್ಥ ಮಹೇಶ್ ಅವರೇ. ಶ್ರೀನಗರ ಕಿಟ್ಟಿ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ.