ರೋರಿಂಗ್ ಸ್ಟಾರ್ ಶ್ರೀಮುರಳಿ ಮದಗಜ ನಂತರ ನಟಿಸುತ್ತಿರೋ ಹೊಸ ಸಿನಿಮಾ ಬಘೀರ. ಈ ಚಿತ್ರಕ್ಕೆ ಕಥೆ ಬರೆದಿರುವುದು ಪ್ರಶಾಂತ್ ನೀಲ್. ಡೈರೆಕ್ಷನ್ ಮಾಡುತ್ತಿರೋದು ಡಾ.ಸೂರಿ. ಲಕ್ಕಿ, ಕ್ವಾಟ್ಲೆ ಸತೀಶ ಚಿತ್ರಗಳನ್ನು ನಿರ್ದೇಶಿಸಿದ್ದ ಸೂರಿ, ಈಗ ಬಘೀರನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಈಗ ಕಾಲ ಕೂಡಿ ಬಂದಿದ್ದು ಮೇ 20ರಂದು ಸಿನಿಮಾಗೆ ಮುಹೂರ್ತ ನಡೆಯುತ್ತಿದೆ.
ಜಂಗಲ್ ಬುಕ್ ಕಾರ್ಟೂನ್ ನೋಡಿರುವವರಿಗೆ ಬಘೀರ ಅನ್ನೋ ಹೆಸರು ಪರಿಚಿತವಾಗಿಯೇ ಇರುತ್ತೆ. ಕಷ್ಟಕ್ಕೆ ಸಿಲುಕುವ ಮೋಗ್ಲಿಯನ್ನು ಕಾಪಾಡುವವನು ಬಘೀರ. ವೆನ್ ಸೊಸೈಟಿ ಬಿಕಮ್ಸ್ ಎ ಜಂಗಲ್.. ಅಂಡ್ ಓನ್ಲಿ ಒನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಮಾಜವೇ ಒಂದು ಅರಣ್ಯವಾದಾಗ ಪರಭಕ್ಷಕನೇ ನ್ಯಾಯಕ್ಕಾಗಿ ಹೋರಾಡುತ್ತಾನೆ ಅನ್ನೋ ಅರ್ಥವದು. ಚಿತ್ರದಲ್ಲಿ ಶ್ರೀಮುರಳಿಯವರದ್ದು ಪೊಲೀಸ್ ಆಫೀಸರ್ ಪಾತ್ರ. ಚಿತ್ರವನ್ನು ಹೊಂಬಾಳೆಯವರು ಪ್ರೊಡ್ಯೂಸ್ ಮಾಡ್ತಿರೋದ್ರಿಂದ ಅದ್ಧೂರಿತನಕ್ಕೆ ನೋ ಪ್ರಾಬ್ಲಂ.