ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ವಿಕ್ರಾಂತ್ ರೋಣ ಈಗಾಗಲೇ ಮೇಕಿಂಗ್‍ನಿಂದ ಗಮನ ಸೆಳೆದಿದೆ. ಟೀಸರ್ ವ್ಹಾವ್ ಎನ್ನಿಸಿದೆ. ಗುಮ್ಮನ ಕಥೆಯ ಸಸ್ಪೆನ್ಸ್ ಕೊಟ್ಟಿರುವ ಅನೂಪ್ ಭಂಡಾರಿ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡುತ್ತಿದ್ದಾರೆ. ಜುಲೈ 28ಕ್ಕೆ ರಿಲೀಸ್ ಆಗುತ್ತಿರೋ ಕಿಚ್ಚನ ಡಿಫರೆಂಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಸಪೋರ್ಟು ಕೂಡಾ ಸಿಕ್ಕಿದೆ.
ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್‍ನ್ನು ಸಲ್ಮಾನ್ ಖಾನ್ ಅವರ ಎಸ್‍ಕೆಎಫ್ ರಿಲೀಸ್ ಮಾಡುತ್ತಿದೆ. ಸಲ್ಮಾನ್ ಮತ್ತು ಸುದೀಪ್ ಸ್ನೇಹ ಹೊಸದೇನಲ್ಲ. ದಬಾಂಗ್‍ನಲ್ಲಿ ಕೇವಲ ಸಲ್ಮಾನ್ ಖಾನ್ ಅವರಿಗಾಗಿ ವಿಲನ್ ಆಗಿ ನಟಿಸಿದ್ದರು ಕಿಚ್ಚ. ಸುದೀಪ್ ಅವರೊಂದಿಗೆ ಇರುವ ಸ್ನೇಹವನ್ನು ವಿಭಿನ್ನ ರೀತಿಯಲ್ಲಿ ಸೆಲಬ್ರೇಟ್ ಮಾಡಿರುವುದು ಸಲ್ಮಾನ್ ಖಾನ್. ಈಗ ವಿಕ್ರಾಂತ್ ರೋಣ ಹಿಂದಿ ಡಿಸ್ಟ್ರಿಬ್ಯೂಷನ್ ಹೊಣೆ ಹೊತ್ತಿದ್ದಾರೆ ಸಲ್ಮಾನ್.
ವಿಕ್ರಾಂತ್ ರೋಣ ಚಿತ್ರಕ್ಕೆ ಈಗಾಗಲೇ ಬೇರೆ ಬೇರೆ ಚಿತ್ರರಂಗದಲ್ಲಿ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ಕನ್ನಡದ ಜೊತೆಗೆ ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಣ ಜಾಕ್ ಮಂಜು ಅವರದ್ದು. ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತು ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಗುಮ್ಮನ ಕಥೆಯಲ್ಲಿದೆ.