` ಅಶ್ವತ್ಥಾಮನ ಕಥೆಗೆ ಶಿವಣ್ಣ ಹೀರೋ...! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶ್ವತ್ಥಾಮನ ಕಥೆಗೆ ಶಿವಣ್ಣ ಹೀರೋ...!
Sachin Ravi, Shivarajkumar

ಮಹಾಭಾರತ ಓದಿದ್ದವರಿಗೆ.. ಕಥೆಯನ್ನು ಸೀರಿಯಲ್, ಸಿನಿಮಾಗಳಲ್ಲಿ ನೋಡಿದ್ದವರಿಗೆ.. ಅಶ್ವತ್ಥಾಮನ ಕಥೆ ಗೊತ್ತೇ ಇರುತ್ತೆ. ಅವನು ಸಾವು ಗೆದ್ದವನು. ಉಪ ಪಾಂಡವರನ್ನು ಮೋಸದಿಂದ ಪಾಂಡವರು ಎಂದುಕೊಂಡು ಕೊಲ್ಲುವ ಅಶ್ವತ್ಥಾಮ, ನಂತರ ತಾನು ಕೊಂದದ್ದು ಪಾಂಡವರ ಮಕ್ಕಳಾದ ಉಪ ಪಾಂಡವರನ್ನು ಎಂದು ಗೊತ್ತಾದಾಗ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿ ಬಿಡುತ್ತಾನೆ. ಕೃಷ್ಣನ ಸಾಹಸದಿಂದ  ಆ ಬ್ರಹ್ಮಾಸ್ತ್ರ ಭೂಮಂಡಲವನ್ನು ಸುಡುವ ಬದಲು,  ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭವನ್ನು ಕೊಲ್ಲುತ್ತದೆ. ಆ ಮಗುವೇ ಪರೀಕ್ಷಿತ. ಆ ಮಗುವಿಗೆ ಪುನರ್ ಜನ್ಮ ನೀಡುವ ಶ್ರೀಕೃಷ್ಣ, ಅಶ್ವತ್ಥಾಮನನಿಗೆ ಸಾವೇ ಬರದಂತೆ ಶಾಪ ಕೊಡುತ್ತಾನೆ. ಅಂತಹ ಅಶ್ವತ್ಥಾಮನ ಪುರಾಣದ ಕಥೆಯನ್ನು ಈಗಿನದಕ್ಕೆ ಬ್ಲೆಂಡ್ ಮಾಡಿದರೆ ಹೇಗಿರುತ್ತೆ?

ಹೌದು, ಅಂತಾದ್ದೊಂದು ವಿಚಿತ್ರ ಕಥೆ ಸಿದ್ಧವಾಗಿದೆ. ಆ ಕಥೆಗೆ  ಹೀರೋ ಶಿವ ರಾಜಕುಮಾರ್. ಡೈರೆಕ್ಟರ್ ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ.

ಇದೊಂದು ಸ್ಪೈ ಥ್ರಿಲ್ಲರ್ ಸ್ಟೋರಿ. ಅದನ್ನು ಈಗ ಇರುವ ಅಶ್ವತ್ಥಾಮನ ಮೂಲಕ ಹೇಳುತ್ತಿದ್ದೇನೆ ಎನ್ನುವ ಸಚಿನ್ ರವಿ, ಇದೊಂದು ಸಂಪೂರ್ಣ ಕಾಲ್ಪನಿಕ ಸಿನಿಮಾ ಎಂದಿದ್ದಾರೆ.

ಶಿವಣ್ಣ ಎಂದಿನಂತೆ ಕೈತುಂಬಾ ಚಿತ್ರಗಳನ್ನಿಟ್ಟುಕೊಂಡಿದ್ದಾರೆ. ಇದೆಲ್ಲದರ ನಡುವೆ ಇಷ್ಟವಾದ ಈ ಕಥೆಗೆ ಜೈ ಎಂದಿದ್ದಾರೆ. ಸಿನಿಮಾ ಯಾವಾಗ ಶುರುವಾಗುವುದೋ ಕಾದು ನೋಡಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery