ಎಲ್ಲ ಯುದ್ಧಗಳೂ ರಣರಂಗದಲ್ಲೇ ನಡೆಯೋದಿಲ್ಲ..
ಅನ್ನೋ ಟ್ಯಾಗ್ಲೈನ್ ಕೊಟ್ಟು ಐತಿಹಾಸಿಕ ಚಿತ್ರ ಎಂಬ ಸುಳಿವು ಕೊಟ್ಟಿದ್ದ ನೀನಾಸಂ ಸತೀಶ್ ಅವರ ಹೊಸ ಚಿತ್ರದ ಹೆಸರು ಅಶೋಕ ಬ್ಲೇಡ್. ಇದು 70ರ ದಶಕದ ಕಥೆಯಂತೆ.
ಅಶೋಕ ಬ್ಲೇಡ್ ಜೊತೆ ಭಾರತೀಯರಿಗೆ ಒಂದು ವಿಚಿತ್ರ ಸಂಬಂಧ ಇದೆ. ಈಗ ಎರಡು.. ಮೂರು ಬ್ಲೇಡ್ಗಳ ರೇಜರ್ಗಳು ಬಂದಿವೆ. ಆದರೆ.. ಬ್ಲೇಡುಗಳ ಆರಂಭದ ಕಾಲದಲ್ಲಿ ಒಂದು ಜನರೇಷನ್ನಿನ ಅವಿಭಾಜ್ಯ ಅಂಗವೇ ಆಗಿದ್ದುದು ಅಶೋಕ ಬ್ಲೇಡ್. ಅದನ್ನು ತಮ್ಮ ಚಿತ್ರದ ಟೈಟಲ್ ಆಗಿಸಿರೋ ನೀನಾಸಂ ಸತೀಶ್ ಚಿತ್ರದ ಬಗ್ಗೆ ಒಂದು ಸಖತ್ ಕುತೂಹಲವನ್ನಂತೂ ಹುಟ್ಟುಹಾಕಿದ್ದಾರೆ.
ವಿನೋದ್ ವಿ ದೊಂಡಲಾಯ್ ಅನ್ನೋ ಹೊಸ ನಿರ್ದೇಶಕರ ಹೊಸ ಪ್ರಯತ್ನ ಅಶೋಕ ಬ್ಲೇಡ್. ಪೋಸ್ಟರ್ ಹೊರಬಿದ್ದಿದೆ. 70ರ ದಶಕದ ಐಷಾರಾಮಿ ಕಾರಿನ ಮೇಲೆ ಅಶೋಕ ಬ್ಲೇಡುಗಳ ಸುರಿಮಳೆಯನ್ನೇ ಪೋಸ್ಟರ್ನಲ್ಲಿ ತೋರಿಸಿದ್ದಾರೆ. ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಸತೀರ್ಶ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಸತೀಶ್ ಜೊತೆಗೆ ವರ್ದನ್ ಹರಿ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೆ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಬೆಲ್ಬಾಟಂ ಖ್ಯಾತಿಯ ಟಿ.ಕೆ.ದಯಾನಂದ್ ಅವರದ್ದು.