ತ್ರಿವಳಿ ತಲಾಖ್. ಮುಸ್ಲಿಮ್ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಕಾಡುತ್ತಿರುವ ಪಿಡುಗು. ಇತ್ತೀಚೆಗಷ್ಟೇ ಇದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಾನೂನು ತಂದಿತ್ತು. ಅಂದರೆ ಒಮ್ಮೆಗೇ ತಲಾಖ್ ಎಂದು ಮೂರು ಬಾರಿ ಹೇಳುವಂತಿಲ್ಲ. ಇಸ್ಲಾಂ ಧರ್ಮದ ನಿಯಮಗಳ ಅನುಸಾರವೇ ನಡೆಯಬೇಕು ಎಂದು ಕಾನೂನು ತಂದಿತ್ತು. ಆದರೆ ಇಂತಹ ಸೂಕ್ಷ್ಮ ಎಳೆಯ ಕಥೆಯನ್ನು ಸಾರಾ ಅಬೂಬ್ಕರ್ ತುಂಬ ಹಿಂದೆಯೇ ಕಥೆಯ ರೂಪದಲ್ಲಿ ತಂದಿದ್ದರು. ಆ ಕಥೆಯೇ ಸಾರಾ ವಜ್ರ.
ತ್ರಿವಳಿ ತಲಾಖ್‍ನಿಂದ ಹೆಣ್ಣು ಮಗಳೊಬ್ಬಳು ಅನುಭವಿಸುವ ನೋವಿನ ಕಥೆ ಚಿತ್ರದಲ್ಲಿದೆ. 1980ರ ದಶಕದ ಕಥೆಯಲ್ಲಿ ಬ್ಯಾರಿ ಹುಡುಗಿಯಾಗಿ ನಟಿಸಿದ್ದಾರೆ ಅನು ಪ್ರಭಾಕರ್. 20 ವರ್ಷದ ಯುವತಿಯಿಂದ 60 ವರ್ಷದ ಅಜ್ಜಿಯವರೆಗೆ ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಿ.ಪುನೀತ್ ರಾಜಕುಮಾರ್ ತುಂಬಾ ಇಷ್ಟಪಟ್ಟಿದ್ದ ಕಥೆ ಸಿನಿಮಾ ರೂಪದಲ್ಲಿ ರೆಡಿಯಾಗಿದ್ದು, ರಿಲೀಸ್ ಆಗೋಕೆ ಸಿದ್ಧವಾಗಿದೆ. ಅನುಪ್ರಭಾಕರ್ ಜೊತೆಗೆ ಗಾಯಕಿ ಸುಹಾನಾ, ಆಂಕರ್ ರೆಹಮಾನ್, ಸುಧಾ ಬೆಳವಾಡಿ, ರಮೇಶ್ ಭಟ್ ಕೂಡಾ ನಟಿಸಿದ್ದಾರೆ. ಚಿತ್ರಕ್ಕೆ ನರೇಂದ್ರ ಬಾಬು ಚಿತ್ರಕಥೆ , ಸಂಭಾಷಣೆ ಬರೆದಿದ್ದರೆ ನಿರ್ದೇಶನ ಮಾಡಿರುವುದು ಶ್ವೇತಾ ಶೆಟ್ಟಿ. ಸಂಭ್ರಮ ಡ್ರೀಮ್ ಹೌಸ್ ಮತ್ತು ಎಂ.ದೇವೇಂದ್ರ ರೆಡ್ಡಿ ಜಂಟಿ ನಿರ್ಮಾಣದ ಚಿತ್ರವಿದು.