` ತೂಕ ಹೆಚ್ಚಿಸಿಕೊಂಡೂ.. ಇಳಿಸಿಕೊಂಡೂ ಗೆದ್ದ ವಿಐಪಿಗಳು ಇವರೇ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ತೂಕ ಹೆಚ್ಚಿಸಿಕೊಂಡೂ.. ಇಳಿಸಿಕೊಂಡೂ ಗೆದ್ದ ವಿಐಪಿಗಳು ಇವರೇ..!
ತೂಕ ಹೆಚ್ಚಿಸಿಕೊಂಡೂ.. ಇಳಿಸಿಕೊಂಡೂ ಗೆದ್ದ ವಿಐಪಿಗಳು ಇವರೇ..!

ಕಿರುತೆರೆ ನಟಿ ಚೇತನಾ ರಾಜ್ ಸಾವು ಸಂಚಲನ ಮೂಡಿಸಿದೆ. ಇತ್ತೀಚೆತೆ ನೀವು ತುಂಬಾ ದಪ್ಪಗಿದ್ದೀರಾ..? ಸಣ್ಣಗಾಗೋದು ಹೇಗೆ? ಸಣ್ಣಗಿದ್ದೀರಾ..? ದಪ್ಪಾಗಾಗೋದು ಹೇಗೆ..? ಅನ್ನೋ ಜಾಹೀರಾತುಗಳನ್ನು ನೋಡಿಯೇ ಇರುತ್ತೀರಿ. ಇದು ಹೆಚ್ಚಿಗೆ ಕಾಡುವುದು ಸಿನಿಮಾ, ಕಿರುತೆರೆ ನಟ ನಟಿಯರಿಗೆ. ಸಣ್ಣಗಾಗಲು ಹೋಗಿ ಸತ್ತವರಲ್ಲಿ ಚೇತನಾ ರಾಜ್ ಮೊದಲನೆಯವರಲ್ಲ. ಕೊನೆಯವರೂ ಆಗೋದಿಲ್ಲ. ಈ ರೀತಿ ದಪ್ಪಗಿದ್ದು ಸಣ್ಣಗಾದವರಲ್ಲಿ ದೊಡ್ಡ ದೊಡ್ಡ ನಟ, ನಟಿಯರಿದ್ದಾರೆ.

ಅದ್ನಾನ್ ಸಾಮಿ : ಗಾಯಕ. ಒಂದು ಕಾಲದಲ್ಲಿ 200 ಕೆಜಿ ತೂಗುತ್ತಿದ್ದ ಅದ್ನಾನ್ ಸಾಮಿ, ನಂತರ ಏಕ್‍ದಂ 156 ಕೆಜಿಗೆ ಇಳಿದು, ನಂತರ 100 ಕೆಜಿಯೊಳಗೆ ಬಂದರು. ಆದರೆ ಅದು ಆಪರೇಷನ್ ಮಾಡಿಸಿಕೊಂಡು ಸಣ್ಣಗಾಗಿದ್ದಲ್ಲ. ಡಯಟ್ ಮತ್ತು ವ್ಯಾಯಾಮ ಕಾರಣ ಎಂದರು.

ಸೋನಂ ಕಪೂರ್ : ನಟಿ. ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಅವರದ್ದೂ ಇದೇ ಕಥೆ. ಸಿನಿಮಾಗೆ ಬರುವ ಮುನ್ನ ಡುಮ್ಮಗಿದ್ದ ಸೋನಂ, ನಂತರ ಬ್ಯೂಟಿ ಎಂದರೆ ಹೀಗಿರಬೇಕು ಎನ್ನುವಂತೆ ಸಣ್ಣಗಾದರು.

ಸೋನಾಕ್ಷಿ ಸಿನ್ಹಾ : ನಟಿ. ಶತ್ರುಘ್ನ ಸಿನ್ಹಾ ಪುತ್ರಿ. ಸಿನಿಮಾಗೆ ಬರುವ ಮುನ್ನ ಸೋನಾಕ್ಷಿಯೂ 100 ಕೆಜಿಗೂ ಹೆಚ್ಚು ತೂಗುತ್ತಿದ್ದವರು. ನಂತರ ಸಣ್ಣಗಾದರು.

ಸಾರಾ ಅಲಿ ಖಾನ್, ಅಲಿಯಾ ಭಟ್, ಪರಿಣೀತಿ ಚೋಪ್ರಾ, ಕರೀನಾ ಕಪೂರ್.. ಹೀಗೆ ಹಲವರು ದಪ್ಪಗಾಗಿ ಸಣ್ಣಗಾದವರು. ಐಶ್ವರ್ಯಾ ರೈ ಬಚ್ಚನ್, ಭೂಮಿ ಪಡ್ನೇಕರ್ ಕೂಡಾ ತಾಯಿಯಾದ ಮೇಲೆ ಡುಮ್ಮಿಯಾಗಿದ್ದವರೇ.

ನಟರಾದ ಅಮೀರ್ ಖಾನ್, ಕಮಲ್ ಹಾಸನ್.. ಮೊದಲಾದವರು ಸಿನಿಮಾಗಾಗಿ ಸಣ್ಣಗಾಗಿ, ದಪ್ಪಗಾಗೋದನ್ನ ಹವ್ಯಾಸ ಮಾಡಿಕೊಂಡಿದ್ದಾರೆ.

ತೆಲುಗಿನಲ್ಲಿ ನಟಿ ಅನುಷ್ಕಾ ಶೆಟ್ಟಿ ಕೂಡಾ ಚಿತ್ರವೊಂದಕ್ಕಾಗಿ ದಪ್ಪಗಾಗಿದ್ದರು. ನಂತರ ಸಣ್ಣಗಾದರು. ಅನುಷ್ಕಾ ಶೆಟ್ಟಿ ಯೋಗ ಟೀಚರ್ ಕೂಡಾ ಹೌದು. ಆಪರೇಷನ್ ಅಲ್ಲ ಅನ್ನೋದನ್ನ ಹಲವರು ಖಚಿತ ಪಡಿಸಿದರು.

ನಟರಾದ ಫರ್ದೀನ್ ಖಾನ್, ಅರ್ಜುನ್ ಕಪೂರ್ ಕೂಡಾ ಒಂದು ಕಾಲದಲ್ಲಿ ದಪ್ಪಗಿದ್ದವರೇ.

ಇವರಲ್ಲಿ ಹಲವರ ಬಗ್ಗೆ ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳಿವೆ. ಕೆಲವರು ನಿರಾಕರಿಸಿದ್ದಾರೆ. ಇನ್ನೂ ಕೆಲವರು ಒಪ್ಪಿಕೊಂಡೂ ಇಲ್ಲ. ನಿರಾಕರಿಸಿಯೂ ಇಲ್ಲ.

ಕನ್ನಡದಲ್ಲಿಯೂ ಅಷ್ಟೆ, ನಟ ಜಗ್ಗೇಶ್ ಒಮ್ಮೆ ದಪ್ಪಗಿದ್ದು ಸಣ್ಣಗಾದವರೇ. ಆದರೆ ಜಗ್ಗೇಶ್ ತಮ್ಮ ವ್ಯಾಯಾಮ, ಡಯಟ್ ಎಲ್ಲವನ್ನೂ ತೆರೆದ ಪುಸ್ತಕದಂತಿಟ್ಟು ಇವತ್ತು ರೋಲ್ ಮಾಡೆಲ್ ಎನಿಸಿಕೊಂಡಿದ್ದಾರೆ. ಆರ್‍ಜೆ ಆಗಿರುವ ವಿನಾಯಕ್ ಜೋಷಿ ಅವರಂತೂ ದಪ್ಪಗಿರುವವರು ಸಣ್ಣಗಾಗೋದು ಹೇಗೆ ಅನ್ನೋದಕ್ಕೆ ರೋಲ್ ಮಾಡೆಲ್. ಅವರು ರನ್ನಿಂಗ್ ಮೂಲಕವೇ ಬೊಜ್ಜು ಕರಗಿಸಿದವರು.

ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಜಕಾರಣಿಗಳಾದ ನಿತಿನ್ ಗಡ್ಕರಿ, ಅಮಿತ್ ಶಾ.. ಮೊದಲಾದವರೂ ಈಗ ಸ್ಲಿಮ್ ಆಗಿರುವುದರ ಹಿಂದೆ ಕೆಲವರು ಆಪರೇಷನ್ ಕಾರಣ ಎಂದರೆ, ಇನ್ನೂ ಕೆಲವರು ಡಯಟ್ ಕಾರಣ ಅಂತಾರೆ.

ಈ ರೀತಿ ಆಪರೇಷನ್ ಎಡವಟ್ಟಾಗಿ ಜೀವ ಕಳೆದುಕೊಂಡ ಸೆಲಬ್ರಿಟಿಗಳಲ್ಲಿ ಮೊದಲ ಹೆಸರು ಬರೋದು ತೆಲುಗು ಚಿತ್ರರಂಗದ ಖ್ಯಾತ ನಟಿ ಆರತಿ ಅಗರ್‍ವಾಲ್ ಅವರದ್ದು. ಲಿಪೋಸೆಕ್ಷನ್ ಸರ್ಜರಿ ವೇಳೆ ಮೃತಪಟ್ಟಾಗ ಅವರ ವಯಸ್ಸಿನ್ನೂ 31 ವರ್ಷ. ಅದಾದ ನಂತರ ಹಲವರು ಈ ರೀತಿಯ ಸರ್ಜರಿಗಳು ಎಡವಟ್ಟಾಗಿ ಜೀವ ಬಿಟ್ಟಿದ್ದಾರೆ. ಮಿಷ್ತಿ ಮುಖರ್ಜಿ(ಅತಿಯಾದ ಡಯಟ್), ನಟ ಬುಲೆಟ್ ಪ್ರಕಾಶ್, ರಾಕೇಶ್.. ಸೇರಿದಂತೆ ಹಲವರು ಈ ಲಿಪೋಸೆಕ್ಷನ್ ಅನ್ನೋ ಸರ್ಜರಿ ವೇಳೆ ಸಾವನ್ನಪ್ಪಿದ್ದಾರೆ.

ದಪ್ಪಗಿದ್ದರೆ ಗ್ಲಾಮರ್ ಇರಲ್ಲ. ಅವಕಾಶಗಳು ಸಿಗಲ್ಲ ಅನ್ನೋದು ಎಲ್ಲದರ ಮೂಲ ಕಾರಣ. ದಪ್ಪಗಿದ್ದರೇನಂತೆ.. ಕಾರಣಗಳು ಹಲವಾರಿರುತ್ತವೆ. ಡೋಂಟ್ ವರಿ ಅನ್ನೋ ರಮ್ಯಾ ಅವರ ಮಾತು ಮತ್ತು ವರ್ತನೆಯಲ್ಲಿ ಎಲ್ಲದಕ್ಕೂ ಉತ್ತರ ಇದೆ.