ಕನ್ನಡದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ಕ್ಷಣದಿಂದಲೂ ದಾಖಲೆಗಳನ್ನು ಉಡಾಯಿಸುತ್ತಲೇ ಮುನ್ನುಗ್ಗುತ್ತಿದೆ. ಪ್ರಶಾಂತ್ ನೀಲ್ ಅವರ ಡೈರೆಕ್ಷನ್, ಯಶ್-ರವೀನಾ-ಸಂಜಯ್ ದತ್-ಶ್ರೀನಿಧಿ ಶೆಟ್ಟಿ ನಟನೆ.. ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಮೋಡಿ ಮಾಡಿದೆಯೆಂದರೆ.. ಇದು ಕನ್ನಡದವರ ಸಿನಿಮಾ ಎಂದು ಹೇಳಿಕೊಳ್ಳೋದೇ ಕನ್ನಡಿಗರ ಹೆಮ್ಮೆಯಾಗಿಬಿಟ್ಟಿದೆ. ಈಗ ಕೆಜಿಎಫ್ ಚಾಪ್ಟರ್ 2, ಬಾಹುಬಲಿ 2ನ ದಾಖಲೆಯನ್ನೂ ಮೀರಿದೆ.
ಬಾಹುಬಲಿ 2, ಇಂಡಿಯನ್ ಮಾರುಕಟ್ಟೆಯಲ್ಲಿ 1810 ಕೋಟಿ ಗಳಿಸಿತ್ತು. ದಂಗಲ್ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ 2100 ಕೋಟಿ ಬಿಸಿನೆಸ್ ಮಾಡಿರುವುದು ನಿಜವಾದರೂ, ಇಂಡಿಯಾ ಮಾರುಕಟ್ಟೆಯಲ್ಲಿ ದಂಗಲ್ ಕಲೆಕ್ಷನ್ 400 ಕೋಟಿಯಷ್ಟೆ. ಬಾಹುಬಲಿ 2 ನಂತರ ಇಂಡಿಯನ್ ಭಾಷೆಗಳ ಮಾರುಕಟ್ಟೆಯಲ್ಲಿ 1000 ಕೋಟಿ ದಾಟಿದ್ದ ಚಿತ್ರಗಳು ಆರ್.ಆರ್.ಆರ್. ಮತ್ತು ಕೆಜಿಎಫ್ ಚಾಪ್ಟರ್ 2 ಮಾತ್ರ. ಆರ್.ಆರ್.ಆರ್. ಚಿತ್ರದ 1100 ಕೋಟಿ ಕಲೆಕ್ಷನ್‍ನ್ನು ಯಾವತ್ತೋ ಮೀರಿದ್ದ ಕೆಜಿಎಫ್ ಚಾಪ್ಟರ್ 2, ಈಗ ಬಾಹುಬಲಿ 2ನ ಗಳಿಕೆಯನ್ನೂ ಮೀರಿದೆ. 33 ದಿನಗಳ ನಂತರ ಕೆಜಿಎಫ್ ಚಾಪ್ಟರ್ 2 1200 ಕೋಟಿ ಕಲೆಕ್ಷನ್ ದಾಟಿದೆ. ಇದು ಬಾಹುಬಲಿ 2, ಇಂಡಿಯನ್ ಮಾರುಕಟ್ಟೆಯಲ್ಲಿ ಗಳಿಸಿದ್ದ 1800 ಕೋಟಿಗಿಂತ ಹೆಚ್ಚು.
ಇದರ ನಡುವೆ ಕೆಜಿಎಫ್ ಚಾಪ್ಟರ್ 2 ಒಟಿಟಿಗೂ ಬಂದಿದೆ. ಅಮೇಜಾನ್ ಪ್ರೈಂನಲ್ಲಿ ಕೆಜಿಎಫ್ ಚಾಪ್ಟರ್ 2 ನೋಡೋಕೆ ಸಿಗುತ್ತಿದೆ. ಆದರೆ, ಅದು ಫ್ರೀ ಅಲ್ಲ. ಅಮೇಜಾನ್ ಸಬ್‍ಸ್ಕ್ರಿಪ್ಷನ್ ಇದ್ದರೂ ಕೂಡಾ ಕೆಜಿಎಫ್ 2 ನೋಡೋಕೆ ಎಕ್ಸ್‍ಟ್ರಾ 199 ರೂ. ಕೊಡಬೇಕು. ಈ ಪೇ&ವ್ಯೂ ಸಿಸ್ಟಂ ಒಂದು ತಿಂಗಳು ಇರುತ್ತದೆ.