ಬಾನದಾರಿಯಲ್ಲಿ.. ನೋಡು ಎಂಥ ಚೆಂದ..
ಇದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಅವರ ಸಿನಿಮಾ. ಈ ಜೋಡಿಯ 4ನೇ ಸಿನಿಮಾ. ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, 99 ಚಿತ್ರಗಳ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಒಟ್ಟಿಗೇ ಮಾಡುತ್ತಿರೋ ಹೊಸ ಸಿನಿಮಾ. ಚಿತ್ರದ ಟೈಟಲ್ನಲ್ಲೇ ಲವ್ ಸಿಂಬಲ್ನ್ನು ಡಿಫರೆಂಟ್ ಆಗಿ ಡಿಸೈನ್ ಮಾಡಿಸಿದ್ದಾರೆ ಪ್ರೀತಮ್. ಆದರೆ, ಇದು ಲವ್ ಸ್ಟೋರಿ ಅಲ್ವಂತೆ.
ಇದು ಪ್ರೇಮಕಥೆ ಅಲ್ಲ. ಪ್ರೇಮದ ಕುರಿತ ಕಥೆ.. ಅನ್ನೋ ಮೂಲಕ ಬೇರೆಯದೇ ವರ್ಷನ್ ಚಿತ್ರದಲ್ಲಿದೆ ಎಂದಿದ್ದಾರೆ ಗಣೇಶ್. ಚಿತ್ರದಲ್ಲಿನ ಗಣೇಶ್ ಅವರ ಲುಕ್ ರಿವೀಲ್ ಮಾಡಿದ್ದಾರೆ ಪ್ರೀತಮ್ ಗುಬ್ಬಿ. ಗಣೇಶ್ ಎದುರು ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀವಾರಿ ಟಾಕೀಸ್ ಬ್ಯಾನರ್ನಲ್ಲಿ ಬರುತ್ತಿರೋ ಚಿತ್ರದಲ್ಲಿ ಅಡ್ವೆಂಚರಸ್ ಲವ್ ಸ್ಟೋರಿ ಇದೆ.