ಸನ್ನಿಲಿಯೋನ್, ಮಾಜಿ ಪೋರ್ನ್ಸ್ಟಾರ್. ಬ್ಲೂಫಿಲಂಗಳಲ್ಲಿ ನಟಿಸಿ.. ಬಿಗ್ಬಾಸ್ಗೆ ಬಂದು.. ಈಗ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿರೋ ಸನ್ನಿ ಲಿಯೋನ್ ಅವರಿಗೆ ನಿನ್ನೆ ಹುಟ್ಟುಹಬ್ಬವಿತ್ತು. ಆ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೇಗೆಲ್ಲ ಆಚರಿಸಿದರು ಎಂದು ನೋಡಿದರೆ ಅಚ್ಚರಿಯಾಗುವುದು ಸತ್ಯ.
ಮಂಡ್ಯದ ಕೊಮ್ಮೇರಹಳ್ಳಿಯಲ್ಲಿ ಸನ್ನಿಲಿಯೋನ್ ಅಭಿಮಾನಿಗಳ ಸಂಘದವರು ರಕ್ತದಾನ ಶಿಬಿರ ಏರ್ಪಡಿಸಿದ್ದರು. ಅಷ್ಟೇ ಅಲ್ಲ, ಅಭಿಮಾನಿಗಳಿಗೆ ಬಾಡೂಟದ ವ್ಯವಸ್ಥೆಯೂ ಇತ್ತು.
ಇನ್ನೊಂದೆಡೆ 20 ಅಡಿ ಉದ್ದದ ಬ್ಯಾನರ್ ಹಾಕಿಸಿ, ಸನ್ನಿಗೆ ಶುಭ ಕೋರಿದರು. ಬಡ ಅನಾಥ ಮಕ್ಕಳ ಪಾಲಿನ ದೇವತೆ ಅನ್ನೋ ಬಿರುದು ಕೊಟ್ಟು, ಆ ಬ್ಯಾನರ್ ಕೆಳಗೆ ಅನಾಥ ಮಕ್ಕಳಿಂದ ಕೇಕ್ ಕಟ್ ಮಾಡಿಸಿದರು.
ಇನ್ನು ಸನ್ನಿಲಿಯೋನ್ಗೆ ಉತ್ತರ ಕರ್ನಾಟಕದ ಗದಗ, ಹಾವೇರಿ, ಬಳ್ಳಾರಿಯಲ್ಲಿ ನೋಂದಾಯಿತ ಅಭಿಮಾನಿ ಸಂಘಟನೆಗಳೇ ಇವೆ. ಆ ಸಂಘಟನೆಗಳೂ ವಿಭಿನ್ನವಾಗಿ ಸನ್ನಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿವೆ.
ಅಂದಹಾಗೆ ಸನ್ನಿಲಿಯೋನ್ ಈಗ 40 ತುಂಬಿ.. 41ಕ್ಕೆ ಕಾಲಿಟ್ಟಿದ್ದಾರೆ.