ನೀನಾಸಂ ಸತೀಶ್ ಚಿತ್ರಗಳೆಂದರೆ ರೊಮ್ಯಾಂಟಿಕ್, ಕಾಮಿಡಿ ಮತ್ತು ಆ್ಯಕ್ಷನ್ ಚಿತ್ರಗಳು ಅನ್ನೋದು ಪ್ರೇಕ್ಷಕರ ಯೋಚನೆ. ಆದರೆ ಅದನ್ನೂ ಮೀರಿದ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ ಸತೀಶ್. ಐತಿಹಾಸಿಕ ಚಿತ್ರಕ್ಕೆ ಓಕೆ ಎಂದಿದ್ದಾರೆ. ಸಮುದಾಯವೊಂದರ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಸದ್ಯಕ್ಕಿರೋ ಮಾಹಿತಿ.
ಸತೀಶ್ ಎಂತಹ ಪಾತ್ರಕ್ಕಾದರೂ ಸೈ ಅನ್ನೋದು ಈಗಾಗಲೇ ಗೊತ್ತಾಗಿದೆ. ಡ್ರಾಮಾ, ಲೂಸಿಯಾ, ಬ್ಯೂಟಿಫುಲ್ ಮನಸುಗಳು, ಅಯೋಗ್ಯ.. ಇತ್ಯಾದಿ ಚಿತ್ರಗಳನ್ನು ನೋಡಿದವರಿಗೆ ಸತೀಶ್ ಅವರ ಅಭಿನಯದ ತಾಕತ್ತೇನು ಅನ್ನೋದು ಗೊತ್ತಿದೆ. ರಂಗಭೂಮಿಯಿಂದ ಬಂದವರಾದ್ದರಿಂದ ಭಾಷೆಯ ಮೇಲೆ ಹಿಡಿತವೂ ಅದ್ಭುತವಾಗಿದೆ. ಐತಿಹಾಸಿಕ ಚಿತ್ರಗಳಿಗೆ ಬೇಕಿರೋ ಅತ್ಯಂತ ದೊಡ್ಡ ಶಕ್ತಿ ಅದು, ಸಂಭಾಷಣೆಯನ್ನು ಸರಿಯಾಗಿ ಹೇಳೋದು. ಸ್ಸೋ.. ಸತೀಶ್ ಅವರಿಗೆ ಪಾತ್ರ ಯಾವುದೇ ಆದರೂ ಸವಾಲಿನದ್ದಂತೂ ಆಗಿರೋದಿಲ್ಲ. ಆ ಚಿತ್ರದ ಟೈಟಲ್ ಇದೇ 15ರಂದು ರಿಲೀಸ್ ಆಗುತ್ತಿದೆ.
ವಿನೋದ್ ವಿ.ದೊಂಡಾಳೆ ಈ ಚಿತ್ರದ ನಿರ್ದೇಶಕರಾಗಿದ್ದು, ನರಹರಿ ನಿರ್ಮಾಪಕರಾಗಿದ್ದಾರೆ. 15ರಂದೇ ಚಿತ್ರದ ಶೀರ್ಷಿಕೆ ಬಹಿರಂಗವಾಗಲಿದೆ. ಸದ್ಯಕ್ಕಂತೂ ಸತೀಶ್ ಕೈತುಂಬಾ ಚಿತ್ರಗಳಿವೆ. ಪೆಟ್ರೋಮ್ಯಾಕ್ಸ್, ದಸರಾ, ಮ್ಯಾಟ್ನಿ, ಗೋದ್ರಾ ರಿಲೀಸ್ ಆಗೋಕೆ ಸಿದ್ಧವಾಗಿವೆ. ತಮಿಳಿನಲ್ಲೂ ಒಂದು ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ.