` ಮ್ಯಾನೇಜರ್ ಮದುವೆಯಲ್ಲಿ ಯಶ್ ರಾಧಿಕಾ ಪಂಡಿತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮ್ಯಾನೇಜರ್ ಮದುವೆಯಲ್ಲಿ ಯಶ್ ರಾಧಿಕಾ ಪಂಡಿತ್
ಮ್ಯಾನೇಜರ್ ಮದುವೆಯಲ್ಲಿ ಯಶ್ ರಾಧಿಕಾ ಪಂಡಿತ್

ಯಶ್ ಅವರೊಂದಿಗೇ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿದ್ದ ಚೇತನ್ ಅವರ ಮದುವೆ ಮೈಸೂರಿನಲ್ಲಿ ನಡೆಯಿತು. ಕೆಜಿಎಫ್ ಯಶಸ್ಸಿನ ನಂತರ ಹೊರಗೆಲ್ಲೂ ಕಾಣಿಸಿಕೊಳ್ಳದೇ ಇದ್ದ ಯಶ್, ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಚೇತನ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಚೇತನ್ ಅವರು ತ್ರಿವೇಣಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣಕ್ಕೆ ಸಾಕ್ಷಿಯಾದರು.

ಮೈಸೂರಿನ ಸಾ.ರಾ.ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಮದುವೆಗೆ ಯಶ್ ಬರಲಿದ್ದಾರೆ ಅನ್ನೋ ಸುದ್ದಿ ಸ್ಥಳೀಯರಿಗೆ ಹೇಗೋ ಸಿಕ್ಕಿಬಿಟ್ಟಿತ್ತು. ಹೀಗಾಗಿ.. ಮದುವೆ ಛತ್ರದ ಸುತ್ತ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಇತ್ತ ಯಶ್ ಅವರ ಕೆಜಿಎಫ್ ಚಾಪ್ಟರ್ 2, ಯಶಸ್ವಿಯಾಗಿ 5ನೇ ವಾರಕ್ಕೆ ಕಾಲಿಟ್ಟಿದೆ. ದಾಖಲೆಗಳು ಧೂಳೀಪಟವಾಗುತ್ತಲೇ ಇವೆ.