ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದ ಒಂದು ಫೋಟೋ ಭಾರೀ ಕುತೂಹಲ ಸೃಷ್ಟಿಸಿತ್ತು. ಏಕೆಂದರೆ ಆ ಫೋಟೋದಲ್ಲಿ ರಮ್ಯಾ ಜೊತೆಗೊಬ್ಬ ಯುವಕನಿದ್ದ. ಅಭಿಮಾನಿಗಳಿಗೆ.. ಅಷ್ಟು ಸಾಕಿತ್ತು.
ಯಾರು..?
ಯಾರು..?
ಯಾರು..?
ಯಾರು..?
ಯಾರು..?
ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ಅವರದ್ದೇ ಆದ ಕಲ್ಪನೆಗಳು. ಕಥೆಗಳು. ಇವೆಲ್ಲಕ್ಕೂ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ.
ಆತನ ಹೆಸರು ವಿಹಾನ್ ಅಂತೆ. ರಮ್ಯಾ ಅವರ ಸ್ಟೈಲಿಸ್ಟ್ ಅಂತೆ. ನಿಮ್ಮ ಕುತೂಹಲ ನೋಡಿ ಖುಷಿಯಾಗುತ್ತಿದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ ರಮ್ಯಾ.
ರಮ್ಯಾ ಚಿತ್ರರಂಗ ಬಿಟ್ಟು ದಶಕ ಕಳೆದಿದ್ದರೆ, ರಾಜಕೀಯ ಬಿಟ್ಟು ಕೆಲವು ವರ್ಷಗಳಾಗಿವೆ. ರಾಜಕೀಯ ಅಭಿಪ್ರಾಯಗಳು ಹೊರಬರುತ್ತಿದ್ದರೂ.. ರಮ್ಯಾ ಆಕ್ಟಿವ್ ರಾಜಕಾರಣದಲ್ಲಿ ಕಾಣಿಸಿಕೊಳ್ತಿಲ್ಲ.
ಮೂಲಗಳ ಪ್ರಕಾರ ಪುನೀತ್ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುವ ಪ್ಲಾನ್‍ನಲ್ಲಿದ್ದ ರಮ್ಯಾ, ಪುನೀತ್ ನಿಧನದ ನಂತರ ಚಿತ್ರರಂಗದ ಕಮ್‍ಬ್ಯಾಕ್ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.