ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರೋ ಕೆಜಿಎಫ್ ಚಾಪ್ಟರ್ 2 ಯಶಸ್ವೀ 25 ದಿನ ಪೂರೈಸಿದೆ. ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದ ರಾಕಿಭಾಯ್ ಈಗಲೂ ಥಿಯೇಟರುಗಳಲ್ಲಿ ಸಿನಿಮಾ ಪ್ರೇಕ್ಷಕರ ಹಾಟ್ ಫೇವರಿಟ್. ಹಾರ್ಟ್ ಫೇವರಿಟ್. ಪ್ರಶಾಂತ್ ನೀಲ್ ಮಾಡಿರುವ ಮ್ಯಾಜಿಕ್ ಅಂಥಾದ್ದು. ಈ ಹಾದಿಯಲ್ಲಿ ಕೆಜಿಎಫ್ ದಾಖಲೆಗಳ ಮೇಲೆ ದಾಖಲೆಯನ್ನು ಬರೆಯುತ್ತಲೇ ಹೋಗಿದೆ. ಬರೆಯುತ್ತಿದೆ.
1. ಕೇವಲ ಕನ್ನಡದಲ್ಲಿ ಕೆಜಿಎಫ್ ಬಿಸಿನೆಸ್ 200 ಕೋಟಿ ಸಮೀಪಕ್ಕೆ ಬಂದಿದೆ. ಇದೇ ವೇಗ ಕಾಯ್ದುಕೊಂಡರೆ ಕನ್ನಡದಲ್ಲಿ 200 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಎಂಬ ದಾಖಲೆ ಬರೆಯಲಿದೆ.
2. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು. ಈ ನಾಲ್ಕೂ ಭಾಷೆಗಳಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಸಿನಿಮಾ ಕೆಜಿಎಫ್.
3. ಹಿಂದಿಯಲ್ಲಿ 400 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ಡಬ್ಬಿಂಗ್ ಸಿನಿಮಾಗಳಲ್ಲಿ ನಂ.2 ಕೆಜಿಎಫ್ ಚಾಪ್ಟರ್ 2. ಮೊದಲ ಸ್ಥಾನದಲ್ಲಿ ಈಗಲೂ ಬಾಹುಬಲಿ 2 ಇದೆ.
4. ತಂಜಾವೂರಿನ ಥಿಯೇಟರ್ ಮಾಲೀಕರೊಬ್ಬರು ಕೆಜಿಎಫ್ ಚಾಪ್ಟರ್ 2ಗೆ ಟ್ವೀಟ್ ಮಾಡಿದ್ದು, ನಮ್ಮ ಥಿಯೇಟರಿನಲ್ಲಿ 20 ವರ್ಷಗಳ ನಂತರ, 25ನೇ ದಿನವೂ ಹೌಸ್‍ಫುಲ್ ಪ್ರದರ್ಶನ ಕಂಡ ಸಿನಿಮಾ ಕೆಜಿಎಫ್ ಎಂದಿದ್ದಾರೆ. 25 ದಿನಗಳ ನಂತರ ಅವರ ಥಿಯೇಟರಿನಲ್ಲಿ ಈ ಹಿಂದೆ ಕೇವಲ ಚಂದ್ರಮುಖಿ ಸಿನಿಮಾ ಹೌಸ್‍ಫುಲ್ ಶೋ ಆಗಿತ್ತಂತೆ.
5. ತಮಿಳುನಾಡಿನಲ್ಲಿ 100 ಕೋಟಿ ಬಿಸಿನೆಸ್ ಮಾಡಿದ ಮೊದಲ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್ 2.
6. 1100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ ದೇಶದ 2ನೇ ಸಿನಿಮಾ ಕೆಜಿಎಫ್ ಚಾಪ್ಟರ್ 2.
7. ಇದೆಲ್ಲದರ ಜೊತೆಗೆ ಇನ್ನೂ ಒಂದು ವಿಶೇಷ ದಾಖಲೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2. 2ನೇ ಸ್ಥಾನದಲ್ಲಿ ಕೆಜಿಎಫ್ 2. ಹಾಗೂ 3ನೇ ಸ್ಥಾನದಲ್ಲಿರೋದು ಆರ್.ಆರ್.ಆರ್. ಮೂರೂ ಡಬ್ಬಿಂಗ್ ಸಿನಿಮಾಗಳೇ ಅನ್ನೋದು ವಿಶೇಷ.
8. ಕೆಜಿಎಫ್ 2 ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಅಮೇಜಾನ್ ಪ್ರೈಮ್ ಖರೀದಿಸಿದೆ. ಅದೂ ದಾಖಲೆಯ 320 ಕೋಟಿಗೆ ಅನ್ನೋ ಸುದ್ದಿ ಇದೆ. ಅದೂ ದಾಖಲೆಯೇ..