ಕಿಚ್ಚ ಸುದೀಪ್ ನಟಿಸಿರೋ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಡೇಟ್‍ಗೆ ಮುಹೂರ್ತ ಹತ್ತಿರವಾಗುತ್ತಿದ್ದಂತೆಯೇ ದಾಖಲೆಗಳ ಬೇಟೆಯೂ ಶುರುವಾಗಿದೆ. ಅನೂಪ್ ಭಂಡಾರಿ ನಿರ್ದೇಶನದ 3ಡಿಯಲ್ಲೂ ಬರುತ್ತಿದೆ. ಇಂಗ್ಲಿಷ್‍ನಲ್ಲೂ ಬರುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾಗೆ ಡಿಮ್ಯಾಂಡ್ ಶುರುವಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ವಿಕ್ರಾಂತ್ ರೋಣನ ಹಕ್ಕುಗಳನ್ನು ತಂಡ ಮಾರಿದ್ದು, ದಾಖಲೆಯ 10 ಕೋಟಿಗೆ ಸೇಲ್ ಆಗಿದೆ.
`ಒನ್ ಟ್ವೆಂಟಿ 8 ಇಂಡಿಯಾ' ಸಂಸ್ಥೆ ವಿಕ್ರಾಂತ್ ರೋಣನ ವಿದೇಶಿ ಹಕ್ಕುಗಳನ್ನು ಖರೀದಿಸಿದೆ. ಓವರ್‍ಸೀಸ್ ಖರೀದಿಯ ಬಗ್ಗೆ ಸಂತೋಷವಿದೆ. ಚಿತ್ರದ ಕಥೆ ಯುನಿವರ್ಸಲ್ ಆಗಿದೆ. ಹಾಗಾಗಿಯೇ ಚಿತ್ರಕ್ಕೆ ಒಳ್ಳೆಯ ಬೇಡಿಕೆ ಇದೆ ಎಂದು ಖುಷಿಯಾಗಿ ಹೇಳಿದ್ದಾರೆ ನಿರ್ಮಾಪಕ ಜಾಕ್ ಮಂಜು.
ಸುದೀಪ್ ಜೊತೆಗೆ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ.