ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ರಿಲೀಸ್‍ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 12ಕ್ಕೆ ಗಾಳಿಪಟ 2 ರಿಲೀಸ್ ಆಗಲಿದೆ. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಾಳಿಪಟದಲ್ಲಿದ್ದ ಗಣೇಶ್, ದಿಗಂತ್ ಮತ್ತು ಅನಂತ್ ನಾಗ್ ಮುಂದವರೆದಿದ್ದರೆ, ಪವನ್ ಕುಮಾರ್ ಹೊಸದಾಗಿ ಸೇರಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರು.
2008ರ ಜನವರಿಯಲ್ಲಿ ಗಾಳಿಪಟ ರಿಲೀಸ್ ಆಗಿತ್ತು.
ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣ ಹೀರೋ ಆಗಿದ್ದರೆ, ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಾಯಕಿಯಾಗಿದ್ದರು. ಜೊತೆಗೆ ಅನಂತ್ ನಾಗ್, ಪದ್ಮಜಾ ರಾವ್ ಇದ್ದರು. ಮುಂಗಾರು ಮಳೆ ಭರ್ಜರಿ ಹಿಟ್ ಆದ ಮೇಲೆ ರಿಲೀಸ್ ಆಗಿದ್ದ ಸಿನಿಮಾ ಗಾಳಿಪಟ. ಆಗಿನ ಕಾಲಕ್ಕೆ 12 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರವದು.
ಗಾಳಿಪಟಕ್ಕೆ ಹರಿಕೃಷ್ಣ ಸಂಗೀತವಿತ್ತು. ಗಾಳಿಪಟ 2ಗೆ ಅರ್ಜುನ್ ಜನ್ಯಾ ಸಂಗೀತವಿದೆ. ಡಿಸೆಂಬರ್ 2, 2019ರಲ್ಲಿ ಸೆಟ್ಟೇರಿದ ಗಾಳಿಪಟ 2 ಕೋವಿಡ್ 19ನಿಂದಾಗಿ ವಿಳಂಬವಾಗಿತ್ತು. ಈಗ ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ನಿರೀಕ್ಷೆಗಳು ದೊಡ್ಡದಾಗಿವೆ.