ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟಿ ನಯನತಾರಾ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 9ರಂದು ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲಿದ್ದಾರೆ. ಇದು ಹಲವೆಡೆ ಹರಿದಾಡುತ್ತಿರುವ ಸುದ್ದಿಯಾಗಿದ್ದರೂ, ಅಧಿಕೃತವಲ್ಲ. ಹಾಗಂತ ಇದು ಸುಳ್ಳು ಎಂದು ಇಬ್ಬರೂ ನಿರಾಕರಿಸಿಲ್ಲ. ಮೂಲಗಳ ಪ್ರಕಾರ ಈ ಮದುವೆ ವೈಯಕ್ತಿಕ ಬಂಧುಗಳ ಸಮ್ಮುಖದಲ್ಲಿ ನೆರವೇರಲಿದೆ. ನಯನತಾರಾ ಮದುವೆ ಬಗ್ಗೆ ಸುದ್ದಿ ಚಿತ್ರರಂಗಕ್ಕೆ ಹೊಸದೇನಲ್ಲ. ಸದ್ಯದ ಮಟ್ಟಿಗೆ ಜೂನ್ 9ರಂದು ಮದುವೆ ನಡೆಯಲಿದೆ. ಅಷ್ಟೆ.
ಇತ್ತೀಚೆಗಷ್ಟೇ ನಯನತಾರಾ ಅಭಿನಯದ ವಿಘ್ನೇಶ್ ನಿರ್ದೇಶನದ ಕಾತುವಾಕುಲಾರೆಂಡು ಕಾದಲ್ ಸಿನಿಮಾ ರಿಲೀಸ್ ಆಗಿತ್ತು. ವಿಜಯ್ ಸೇತುಪತಿ ಹೀರೋ ಆಗಿರುವ ಚಿತ್ರದಲ್ಲಿ ನಯನತಾರಾ ಜೊತೆಗೆ ಸಮಂತಾ ಕೂಡಾ ನಟಿಸಿದ್ದರು. ಚಿತ್ರ ಹಿಟ್ ಆಗುವ ಹಾದಿಯಲ್ಲಿದೆ.
ಕನ್ನಡದಲ್ಲಿ ಸೂಪರ್ ಚಿತ್ರದಲ್ಲಿ ನಟಿಸಿರುವ ನಯನತಾರಾ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸ್ಟಾರ್ ಹಿರೋಯಿನ್. ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿ. ಈಗ ಶಾರೂಕ್ ಜೊತೆ ನಟಿಸುವ ಮೂಲಕ ಬಾಲಿವುಡ್‍ಗೂ ಕಾಲಿಡುತ್ತಿದ್ದಾರೆ. ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಾನುಂ ರೌಡಿದಾನ್ ಚಿತ್ರದಲ್ಲಿ ನಟಿಸಿದ ನಂತರ ಪ್ರೀತಿಗೆ ಬಿದ್ದಿದ್ದರು. ಇಬ್ಬರೂ ಸುಮಾರು 5 ವರ್ಷಗಳಿಂದ ಲಿವಿಂಗ್ ಟುಗೆದರ್`ನಲ್ಲಿದ್ದಾರೆ.