ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ಹಿಂದಿನ ದಿನ ತಮಿಳಿನಲ್ಲಿ ರಿಲೀಸ್ ಆದ ಸಿನಿಮಾ ಬೀಸ್ಟ್. ಕೆಜಿಎಫ್‍ಗೆ ಭರ್ಜರಿ ಪೈಪೋಟಿ ನೀಡಲಿದೆ ಎಂಬ ಸುದ್ದಿಯಿತ್ತು. ಹವಾ ಕೂಡಾ ಇತ್ತು. ಆದರೆ ರಿಲೀಸ್ ಆದ ಮರುದಿನವೇ ಚಿತ್ರಕ್ಕೆ ಬಂದ ಮಿಶ್ರ ಪ್ರತಿಕ್ರಿಯೆಗಳು ಚಿತ್ರವನ್ನು ಗೆಲ್ಲಿಸಲಿಲ್ಲ. ಬದಲಿಗೆ ಕೆಜಿಎಫ್ ಚಾಪ್ಟರ್ 2 ತಮಿಳಿನಲ್ಲೂ ಹಿಟ್ ಆಗಿ ಬಿಸ್ಟ್ ಅನ್ನು ಹಿಂದಿಕ್ಕಿತ್ತು. ತಮಿಳುನಾಡಿನಲ್ಲಿ ಕನ್ನಡದ ಚಿತ್ರವೊಂದು ದಾಖಲೆಯ 100 ಕೋಟಿ ಕ್ಲಬ್ ಸೇರಿದ್ದು ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಈಗ ಕೆಜಿಎಫ್ ಬಗ್ಗೆ ವಿಜಯ್ ಅವರ ತಂದೆಯೇ ಮಾತನಾಡಿದ್ದಾರೆ.
ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಬೀಸ್ಟ್ ಚಿತ್ರವನ್ನು ನೋಡಿದ್ದ ಚಂದ್ರಶೇಖರ್ ಮಗನ ಆಕ್ಟಿಂಗ್, ಪರ್ಫಾಮೆನ್ಸ್ ಇಷ್ಟವಾಯಿತು. ಅದರೆ ನಿರ್ದೇಶಕರು ಎಡವಿದ್ದಾರೆ ಎಂದಿದ್ದರು. ಹಾಗಂತ ಬಿಸ್ಟ್ ಅಟ್ಟರ್ ಫ್ಲಾಪ್ ಚಿತ್ರವಲ್ಲ. ನಿರ್ಮಾಪಕರಿಗೆ ಹಾಗೂ ವಿತರಕರಿಗೆ ಮೋಸ ಮಾಡಿಲ್ಲ. ಕಾರಣ ವಿಜಯ್ ಸ್ಟಾರ್‍ಡಮ್ ಮತ್ತು ತಮಿಳು ಚಿತ್ರಗಳಿಗೆ ಇರುವ ದೊಡ್ಡ ಪ್ರೇಕ್ಷಕ ಬಳಗ.
ಅದಾದ ನಂತರ ಕೆಜಿಎಫ್ ಚಾಪ್ಟರ್ 2 ನೋಡಿರುವ ಮಗನ ಚಿತ್ರಕ್ಕಿಂತ ಕೆಜಿಎಫ್ ಚೆನ್ನಾಗಿದೆ ಎಂದಿದ್ದಾರೆ. ಸಿನಿಮಾ ಪ್ರೇಕ್ಷಕರನ್ನು 3 ಗಂಟೆ ಕಾಲ ಹಿಡಿದಿಡುತ್ತೆ. ಸಣ್ಣ ಪುಟ್ಟ ಲೋಪದೋಷಗಳಿವೆ. ಆದರೆ ಓವರ್ ಆಲ್ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ.