ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಅವರ ಖಡಕ್ ಲುಕ್ಕು ಈಗಾಗಲೇ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಧ್ರುವ ಎದುರು ವೈಭವಿ ಶಾಂಡಿಲ್ಯ ಹೀರೋಯಿನ್.
ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಲಿದೆ ಮಾರ್ಟಿನ್. ಪ್ಯಾನ್ ಇಂಡಿಯಾ ಸಿನಿಮಾ. ಮಣಿ ಶರ್ಮಾ ಮ್ಯೂಸಿಕ್ ಇದೆ.
ಇದೆಲ್ಲದರ ಜೊತೆಗೆ ಮಾರ್ಟಿನ್ ಮೂಲಕ ಧ್ರುವ ಸರ್ಜಾ ಚಿತ್ರಗಳ ಒಂದು ಸಂಪ್ರದಾಯವೂ ಬ್ರೇಕ್ ಆಗಲಿದೆ. ಏನೆಂದರೆ ಮೊದಲ ಚಿತ್ರ ಅದ್ಧೂರಿಯಿಂದ ಶುರುವಾದ ಪದ್ಧತಿ ಅದು. ಅದ್ಧೂರಿ, ಭರ್ಜರಿ, ಬಹದ್ದೂರ್ ಹಾಗೂ ಪೊಗರು ಚಿತ್ರಗಳು ಮಿನಿಮಮ್ 2ರಿಂದ ಎರಡೂವರೆ ವರ್ಷ ತೆಗೆದುಕೊಂಡು ರಿಲೀಸ್ ಆಗಿದ್ದ ಚಿತ್ರಗಳು. ಆದರೆ ಈ ಬಾರಿ ಹಾಗಾಗಿಲ್ಲ. ಬೇಗನೇ ರಿಲೀಸ್ ಆಗುತ್ತಿದೆ. ಇದಕ್ಕೆ ಕಾರಣ ನಿರ್ಮಾಪಕ ಉದಯ್ ಕೆ.ಮೆಹ್ತಾ.
ಇತ್ತ ಡೈರೆಕ್ಟರ್ ಅರ್ಜುನ್‍ಗೂ ಇದು ಸ್ಪೆಷಲ್. ಮದುವೆಯಾಗಿ, ಮಗುವಾದ ನಂತರ ರಿಲೀಸ್ ಆಗಲಿರುವ ಮೊದಲ ಸಿನಿಮಾ ಮಾರ್ಟಿನ್.