ಭಾರತೀಯ ಚಿತ್ರರಂಗದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ಎರಡು ವಾರಗಳ ಅಂತರದಲ್ಲಿ ರಿಲೀಸ್ ಆದವು. ಮೊದಲು ರಿಲೀಸ್ ಆಗಿದ್ದು ರಾಜಮೌಳಿಯ ಆರ್.ಆರ್.ಆರ್. ರಾಮ್ ಚರಣ್ ತೇಜ, ಎನ್‍ಟಿಆರ್, ಅಜಯ್ ದೇವಗನ್, ಅಲಿಯಾ ಭಟ್ ನಟಿಸಿದ್ದ ಸಿನಿಮಾ 1100 ಕೋಟಿ ಬಿಸಿನೆಸ್ ಮಾಡಿತ್ತು.
ಅದಾದ ನಂತರ ಬಂದಿದ್ದು ಕೆಜಿಎಫ್ ಚಾಪ್ಟರ್ 2. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಈಗ ಆರ್.ಆರ್.ಆರ್.ನ್ನೂ ಮೀರಿಸಿದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ನಟಿಸಿದ್ದ ಕೆಜಿಎಫ್ 2 ಆರಂಭದಿಂದಲೂ ನಾಗಾಲೋಟದಲ್ಲಿ ಓಡುತ್ತಿದೆ. 3ನೇ ವಾರದ ನಂತರ ಕೂಡಾ ಹಿಂದಿಯಲ್ಲಿ ರಿಲೀಸ್ ಆದ ಹೊಸ ಚಿತ್ರಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್ ಚಾಪ್ಟರ್ 2.
ಈ ಹಾದಿಯಲ್ಲಿ ಹಲವು ಚಿತ್ರಗಳ ದಾಖಲೆಗಳನ್ನು ಧೂಳೀಫಟ ಮಾಡಿರುವ ಕೆಜಿಎಫ್ ಚಾಪ್ಟರ್ 2, ಈಗ ಆರ್.ಆರ್.ಆರ್. ದಾಖಲೆಯನ್ನೂ ಹಿಂದಿಕ್ಕಿದೆ. 1000 ಕೋಟಿ ದಾಟಿದ್ದನ್ನು ಹೊಂಬಾಳೆ ಅಧಿಕೃತ ಪಡಿಸಿದ ಬೆನ್ನಲ್ಲೇ 1100 ಕೋಟಿಯನ್ನೂ ದಾಟಿ ಹೋಗಿದೆ ಕೆಜಿಎಫ್ 2. ಈದ್ ದಿನ ಕೂಡಾ ಬಾಕ್ಸಾಫೀಸ್‍ನಲ್ಲಿ ತೂಫಾನ್ ಎಬ್ಬಿಸಿರುವ ಕೆಜಿಎಫ್ ಚಾಪ್ಟರ್ 2, ಈಗ ಇಂಡಿಯಾದಲ್ಲಿ ಅತೀ ಹೆಚ್ಚು ಬಿಸಿನೆಸ್ ಮಾಡಿದ ನಂ.2 ಸಿನಿಮಾ.
ಮೊದಲನೇ ಸ್ಥಾನದಲ್ಲಿರೋದು ಬಾಹುಬಲಿ 2. ಇನ್ನು ದಂಗಲ್ ಚಿತ್ರದ ಅತೀ ಹೆಚ್ಚು ಕಲೆಕ್ಷನ್ ಆಗಿದ್ದು ಚೀನಾದಲ್ಲಾದ್ದರಿಂದ.. ಈ ಲಿಸ್ಟ್‍ನಲ್ಲಿಲ್ಲ ಅಷ್ಟೆ. ಈಗ ಕೆಜಿಎಫ್ 2, 4ನೇ ವಾರಕ್ಕೆ ಕಾಲಿಟ್ಟಿದೆ.