ಸಿಂಪಲ್ ಸುನಿ. ಸಿನಿಮಾ ನಿರ್ದೇಶಕರಷ್ಟೇ ಅಲ್ಲ, ಅಪ್ಪಟ ಕ್ರಿಕೆಟ್ ಪ್ರೇಮಿ. ರಣಜಿ ಕ್ರಿಕೆಟ್‍ನ್ನೂ ಬಿಡದೆ ಫಾಲೋ ಮಾಡುವ ಅಪ್ಪಟ ಕ್ರಿಕೆಟ್ ಅಭಿಮಾನಿ. ಸಹಜವಾಗಿಯೇ ಆರ್.ಸಿ.ಬಿ. ಫ್ಯಾನು. ವಿರಾಟ್ ಕೊಹ್ಲಿಗೆ ಕಟ್ಟರ್ ಫ್ಯಾನು. ಹೀಗಾಗಿ ಅವರು ಬುಧವಾರ ಒಂದು ಆಫರ್ ಬಿಟ್ಟಿದ್ದರು. ಚೆನ್ನೈ ಮತ್ತು ಆರ್‍ಸಿಬಿ ಮ್ಯಾಚ್‍ನಲ್ಲಿ ಕೊಹ್ಲಿ ಸೆಂಚುರಿ ಹೊಡೆದರೆ.. ಅವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದವರಿಗೆಲ್ಲ ಅವತಾರ ಪುರುಷ ಟಿಕೆಟ್ ಫ್ರೀ ಎಂದಿದ್ದರು ಸುನಿ.
ಸುನಿ ನಿರ್ದೇಶನದ ಅವತಾರ ಪುರುಷ ಇದೇ ವಾರ ರಿಲೀಸ್. ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾಮಿಡಿ ಹಾರರ್ ಸಬ್ಜೆಕ್ಟ್ ಇದೆ. ಸುನಿಯವರ ಆಸೆ ಮತ್ತು ಆಫರ್‍ಗೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಸಪೋರ್ಟೂ ಇತ್ತು. ಆದರೆ.. ಫೈನಲಿ..
ಆರ್.ಸಿ.ಬಿ. ಮ್ಯಾಚ್ ಗೆಲ್ತು. ಇದೇ ಟೂರ್ನಿಯಲ್ಲಿ ಆಗಿದ್ದ ಸೋಲಿನ ಸೇಡು ತೀರಿಸಿಕೊಳ್ತು. ಆದರೆ ಕೊಹ್ಲಿ ಆಟ 30 ರನ್ನಿಗೇ ಮುಗಿದು ಹೋಯ್ತು. ಸೆಂಚುರಿಗೆ ಜಸ್ಟ್ 70 ರನ್ ಕಡಿಮೆ.
ಆದರೆ.. ಸುನಿ & ಆರ್.ಸಿಬಿ. ಅಭಿಮಾನಿಗಳು ಮಾತ್ರ.. ಐಪಿಎಲ್ ಅತ್ಲಾಗಿರಲಿ.. ಸಿನಿಮಾ ಸೂಪರ್ ಆಗಿ ಗೆಲ್ಲಲಿ ಎನ್ನುತ್ತಿದ್ದಾರೆ.