ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವತಾರ ಪುರುಷ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಹೇಳಿದ್ದಿದು. ಟ್ರೇಲರ್ ರಿಲೀಸ್‍ಗಾಗಿಯೇ ಬಂದಿದ್ದ ಧ್ರುವ ತಮ್ಮ ಮತ್ತು ಪ್ರೇರಣಾ ಅವರೇ ಡೇಟಿಂಗ್ ಡೇಸ್ ಸೀಕ್ರೆಟ್ ಹೇಳಿದರು.
ಶರಣ್ ಸಿನಿಮಾ ಎಂದೊಡನೆ ನನಗೆ ನೆನಪಾಗೋದು ಪ್ರೇರಣಾ. ನಾವು ಡೇಟಿಂಗ್‍ನಲ್ಲಿದ್ದಾಗ ಪ್ರೇರಣಾ ಶರಣ್ ಚಿತ್ರಗಳನ್ನು ಮಾತ್ರ ತಪ್ಪಿಸುತ್ತಲೇ ಇರಲಿಲ್ಲ. ನಾನು ಬ್ಯುಸಿ ಇದ್ದರೂ ಶರಣ್ ಸರ್ ಚಿತ್ರಗಳನ್ನು ಮಿಸ್ ಮಾಡದೇ ನೋಡುತ್ತಿದ್ದೆವು. ಅಧ್ಯಕ್ಷ, ವಿಕ್ಟರಿ.. ಹೀಗೆ ಯಾವುದೇ ಚಿತ್ರಗಳನ್ನು ನಾವು ಮಿಸ್ ಮಾಡಿಕೊಂಡಿಲ್ಲ. ನನ್ನ ಪತ್ನಿ ಪ್ರೇರಣಾ ಶರಣ್ ಫ್ಯಾನ್ ಎಂದರು ಧ್ರುವ ಸರ್ಜಾ.
ಎಲ್ಲ ನಟರ ಅಭಿಮಾನಿಗಳೂ ಎಲ್ಲ ನಟರ ಸಿನಿಮಾಗಳನ್ನೂ ನೋಡಬೇಕು ಎಂದರು ಧ್ರುವ ಸರ್ಜಾ. ನಾನು ನನ್ನ ಜೀವನದಲ್ಲಿ ದೇವರೇ.. ಈ ಚಿತ್ರಗಳನ್ನು ಗೆಲ್ಲಿಸಲೇಬೇಕು ಎಂದು ಕೇಳಿಕೊಂಡಿದ್ದೆ. ಅದರಲ್ಲಿ ಒಂದು ಉಳಿದವರು ಕಂಡಂತೆ. ಇನ್ನೊಂದು ಅವತಾರ ಪುರುಷ. ಪುಷ್ಕರ್ ಅವರಂತಹ ನಿರ್ಮಾಪಕರಿಗಾಗಿ ಈ ಸಿನಿಮಾ ಗೆಲ್ಲಬೇಕು ಎಂದವರು ಸಿಂಪಲ್ ಸುನಿ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.