ಬೇರೆಯದೇ ರಿದಮ್ಮಿನಲ್ಲಿರೋ ಹಾಡು ನಖರನಖ ನಖರನಖ ನುಗ್ಗಿ ಬಂತೋ ನಾಡ ಹುಲಿ.. ಮಧ್ಯೆ ಮಧ್ಯೆ ಶಿವಪ್ಪ ಕಾಯೋ ತಂದೆ.. ಹಾಡು ನೆನಪಿಸುತ್ತೆ. ಇಡೀ ಟ್ರ್ಯಾಕ್ ಟಗರು ಟೈಟಲ್ ಟ್ರ್ಯಾಕ್ ನೆನಪಿಸುತ್ತೆ. ಆದರೆ ಬೇರೆಯದೇ ಫ್ಲೇವರ್ ಇದೆ.. ಹಾಡಿನಲ್ಲಿ ಶಿವಣ್ಣರ ಬೇರೆ ಬೇರೆ ಗೆಟಪ್ಪುಗಳು ಖುಷಿ ಕೊಡ್ತವೆ.
ಶಿವಣ್ಣ ಅಭಿನಯದ 123ನೇ ಸಿನಿಮಾ ಬೈರಾಗಿಗೆ ವಿಜಯ್ ಮೆಲ್ಟನ್ ನಿರ್ದೇಶನದಿದೆ. ಅನೂಪ್ ಸಿಳೀನ್ ಸಂಗೀತದ ಹಾಡಿಗೆ ಸಾಹಿತ್ಯ ಒದಗಿಸಿರುವುದು ಡಾ. ವಿ.ನಾಗೇಂದ್ರ ಪ್ರಸಾದ್. ಅಂಥೋನಿ ದಾಸನ್ ಅವರ ಕಂಚಿನ ಕಂಠದಲ್ಲಿ ಬಂದಿರೋ ಹಾಡು ಕುಣಿಸೋ ಹಾಗಿದೆ.
ಟಗರು ನಂತರ ಶಿವಣ್ಣ ಮತ್ತು ಡಾಲಿ ಒಟ್ಟಿಗೇ ನಟಿಸುತ್ತಿರೋ ಚಿತ್ರವಿದು. ಅಂಜಲಿ ನಾಯಕಿಯಾಗಿರೋ ಚಿತ್ರದಲ್ಲಿ ಅನು ಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೊಬ್ಬ ಯುವ ನಟ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡಾ ನಟಿಸಿರೋ ಚಿತ್ರ ಬೈರಾಗಿ.
ಕೃಷ್ಣ ಸಾರ್ಥಕ್ ನಿರ್ಮಾಣದ ಹಾಡನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.